ಹೊಸಕೋಟೆ ಎಸ್‌ಎಫ್‌ಸಿಎಸ್ ಸಂಘದ ಚುನಾವಣೆಯಲ್ಲಿ 12ಕ್ಕೆ 12 ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶ್ ಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಬೈರೇಗೌಡ ಇದ್ದರು. 
ಜಿಲ್ಲೆ

ಎಸ್‌ಎಪಸಿಎಸ್ ಚುಕ್ಕಾಣಿ ಕಾಂಗ್ರೆಸ್ ತೆಕ್ಕೆಗೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಸಹಕಾರ ಸಂಘದ 12 ನಿರ್ದೇಶಕ ಸ್ಥಾನವೂ ಕೈ ಪಾಲು-ಹೊಸಕೋಟೆ ಕಾರ್ಯಕರ್ತರಲ್ಲಿ ಸಂಭ್ರಮ

ಹೊಸಕೋಟೆ: ಹೊಸಕೋಟೆ ಟೌನ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ 12ಕ್ಕೆ 12 ಸ್ಥಾನಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ.

ತೀವ್ರ ಜಿದ್ದಾಜಿದ್ದಿನ ಕಣವಾಗಿ ಏರ್ಪಟ್ಟಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸಾಲಗಾರರ ಕ್ಷೇತ್ರದ ಸಾಮಾನ್ಯ ಸ್ಥಾನ ಕೆ.ಕೃಷ್ಣಮೂರ್ತಿ, ಹುಲ್ಲೂರು ರಾಜಗೋಪಾಲ್, ಹಾಲಪ್ಪನಹಳ್ಳಿ ಸತೀಶ್, ದಾಸರಹಳ್ಳಿ ಸುಬ್ರಮಣಿ, ಸಾಲಗಾರರ ಕ್ಷೇತ್ರ ಹಿಂದುಳಿದ ಪ್ರವರ್ಗಎ ನಲ್ಲಿ ಎಂ.ಮುನಿಯಪ್ಪ, ಸಾಲಗಾರರ ಕ್ಷೇತ್ರ ಹಿಂದುಳಿದ ಪ್ರವರ್ಗ ಬಿ ದಲ್ಲಿ ಎನ್.ವಿ.ವೆಂಕಟೇಶ್, ಸಾಲಗಾರರ ಕ್ಷೇತ್ರ ಮಹಿಳಾ ಮೀಸಲು ಶ್ರೀ ರಂಜನ, ಆರ್ ಸುಜಾತ, ಸಾಲಗಾರರ ಕ್ಷೇತ್ರ ಪ.ಜಾತಿ ರಾಮಚಂದ್ರ( ರಾಜಪ್ಪ), ಸಾಲಗಾರರ ಕ್ಷೇತ್ರ ಪ.ಪಂಗಡ ಅಪ್ಪಯ್ಯ, ಸಾಲಗಾರರಲ್ಲದ ಮೀಸಲಿನಲ್ಲಿ ಸಿ.ವಿ.ಗಣೇಶ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಮಾದವರೆಡ್ಡಿ ತಿಳಿಸಿದರು.

ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಕಾಲೇಜು ಮೈದಾನದಿಂದ ಕಾಂಗ್ರೆಸ್ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿ ಗೆಲುವಿನ ಸಂಭ್ರಮಾಚರಣೆ ಮಾಡಿದರು.ಬಮುಲ್ ನಿರ್ದೇಶಕ ಎಲ್.ಎನ್.ಟಿ.ಮಂಜುನಾಥ್, ಯುವ ಮುಖಂಡ ಬಿಜಿ ನಾರಾಯಣಗೌಡ, ಟಿ.ಎಸ್.ರಾಜಶೇಖರ್ ಸೇರಿ ಗಣ್ಯರು ನಿರ್ದೇಶಕರನ್ನು ಸನ್ಮಾನಿಸಿದರು.

ಷೇರುದಾರರು ವಿಶ್ವಾಸವಿಟ್ಟು ಅಮೂಲ್ಯ ಮತ ನೀಡಿ ಜಯಗಳಿಸುವಂತೆ ಮಾಡಿದ್ದಾರೆ. ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ಶಾಸಕ ಶರತ್ ಬಚ್ಚೇಗೌಡ ಅವರ ಮಾರ್ಗದರ್ಶನದಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಪಕ್ಷಾತೀತ ಶ್ರಮಿಸುತ್ತೇವೆ.

ಅಗ್ರಹಾರ ಕೃಷ್ಣಮೂರ್ತಿ,ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ

ಸೂಲಿಬೆಲೆ ಸಂಘದಲ್ಲಿ ಬಿಜೆಪಿಯವರು ನಾಮಪತ್ರವನ್ನೇ ನೀಡಿಲ್ಲ, ಹೊಸಕೋಟೆ ಸಂಘದಲ್ಲಿ ನಾಮಪತ್ರ ನೀಡಿ ಚುನಾವಣೆ ೋಷಿಸುವಂತೆ ಮಾಡಿ ಹಣ ವ್ಯರ್ಥ ಮಾಡಿಸಿದ್ದಾರೆ. ಆದರೂ 12ಕ್ಕೆ 12 ಸ್ಥಾನ ನಮಗೆ ದೊರೆತಿವೆ. ಬಿಜೆಪಿ ಬೆಂಬಲಿತರು ಮುಂದಿನ ದಿನಗಳಲ್ಲಿ ನಾಮಪತ್ರ ನೀಡುವಾಗ ಯೋಚನೆ ಮಾಡಲಿ. -ಬಿ.ವಿ. ಬೈರೇಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ. ಹೊಸಕೋಟೆ ಎಸ್‌ಎಫ್‌ಸಿಎಸ್ ಸಂಘದ ಚುನಾವಣೆಯಲ್ಲಿ 12ಕ್ಕೆ 12 ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶ್ ಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಬೈರೇಗೌಡ ಇದ್ದರು.