ಮುದಗಲ್ ಪುರಸಭೆ ಮುಂಭಾಗದಲ್ಲಿ ಪೌರ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು. ಪುರಸಭೆ ವ್ಯವಸ್ಥಾಪಕ ಸುರೇಶ, ನೈರ್ಮಲ್ಯ ನಿರೀಕ್ಷಕಿಯರಾದ ಆರೀಫುನ್ನಿಸಾ ಬೇಗಂ, ಝಕಿಯಾಬೇಗಂ, ಹುಲಗಪ್ಪ ಪೂಜಾರಿ ಇದ್ದರು. 
ಜಿಲ್ಲೆ

ಎಸ್‌ಎಫ್‌ಸಿ ಮುಕ್ತನಿಧಿಯಿಂದ ವೇತನ ನೀಡಿ

ಮುದಗಲ್: ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಪುರಸಭೆ ಮುಂದೆ ರಾಜ್ಯ ಸರ್ಕಾರಿ ಪೌರ ಸೇವಾ ನೌಕರರ ಸಂಘದ ಸ್ಥಳೀಯ ಘಟಕ ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿತು.

ಪುರಸಭೆಯಲ್ಲಿ 33 ಜನ ಕಾಯಂ ಪೌರಕಾರ್ಮಿಕರು, 17 ಜನ ದಿನಗೂಲಿ ನೀರು ಸರಬರಾಜು ಸಿಬ್ಬಂದಿ, ಹೊರಗುತ್ತಿಗೆ ವಾಹನ ಚಾಲಕರು ಮತ್ತು ಮೇಲ್ವಿಚಾರಕರು ಸೇರಿ ಇತರೆ ನೌಕರರು ಕೆಲಸ ಮಾಡುತ್ತಾರೆ. 40 ವರ್ಷಗಳಿಂದಲೂ ರಾಜ್ಯ ಸರ್ಕಾರಿ ನೌಕರರೆಂದು ಪರಗಣಿಸಲು ಒತ್ತಾಯಿಸುತ್ತ ಬಂದಿದೆ.

ಜ್ಯೋತಿ ಸಂಜೀವಿನಿ, ಕೆಜಿಐಡಿ ಸೇರಿ ಸರ್ಕಾರಿ ನೌಕರರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೀರಗಂಟಿಗಳು, ಚಾಲಕರು, ಲೋಡರ್ಸ್, ಕ್ಲೀನರ್ಸ್, ಗಾರ್ಡನರ್, ಸ್ಯಾನಿಟರಿ, ಸೂಪರ್‌ವೈಸರ್,

ಯುಜಿಡಿ ಸಹಾಯಕರು ಸೇರಿ ವಿವಿಧ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು. ದಿನಗೂಲಿ ನೌಕರರನ್ನು ಕಾಯಂ ಮಾಡುವುದು, ಎಲ್ಲ ಸಿಬ್ಬಂದಿಗೆ ಎಸ್‌ಎಫ್‌ಸಿ ಮುಕ್ತನಿಧಿಯಿಂದ ವೇತನ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಬಸವರಾಜ ಕಟ್ಟಿಮನಿ, ಪ್ರಮುಖರಾದ ರಂಗನಾಥ ತಳವಾರ, ಸುರೇಶ, ಹುಲಗಪ್ಪ ಪೂಜಾರಿ, ಕುಪ್ಪಣ್ಣ, ನಿಸಾರಲಿ, ಸಂಜಿವಪ್ಪ ರವಿ ಇತರರಿದ್ದರು.