ಸೇಡಂ: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದ್ದು, ಚುನಾವಣೆ ಪೂರ್ವದಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆಯುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಕೋಡ್ಲಾದಲ್ಲಿ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಅ.೧೩ರಂದು ಸೇಡಂನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈ ಹಿಂದೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಕೋಡ್ಲಾಕ್ಕೆ ಕಿತ್ತೂರ ರಾಣಿ ಚನ್ನಮ್ಮ ಶಾಲೆ, ಮುರಾರ್ಜಿ ದೇಸಾಯಿ ವಸತಿ ಶಾಲೆ ತಂದಿದ್ದೇನೆ. ಇದೀಗ ಹಲವಾರು ಬೇಡಿಕೆಗಳನ್ನು ನನ್ನ ಮುಂದಿಟ್ಟಿದ್ದೀರಿ, ಹಂತ-ಹಂತವಾಗಿ ಎಲ್ಲವನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಮುಖಂಡರಾದ ಶಂಭುರೆಡ್ಡಿ ಮದ್ನಿ, ರವಿ ಸಾಹು ತಂಬಾಕೆ, ಸತೀಶರೆಡ್ಡಿ ಪಾಟೀಲ್, ರಾಜುಗೌಡ ಬೆನಕನಹಳ್ಳಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಶರಣರೆಡ್ಡಿ ಪಾಟೀಲ್ (ಸೇಡಂ), ರವೀಂದ್ರ ನಂದಿಗಾಮ (ಮುಧೋಳ), ಎಪಿಎಂಸಿ ಮಾಜಿ ಅಧ್ಯಕ್ಷ ಹೇಮರೆಡ್ಡಿ ಕಲಕಂಭ, ತಾಪಂ ಮಾಜಿ ಸದಸ್ಯ ಜೈಭೀಮ ಊಡಗಿ, ಪ್ರಮುಖರಾದ ಉಮಾರೆಡ್ಡಿ ಹಂದರಕಿ, ಶಿವಾರೆಡ್ಡಿ ಹೂವಿನಭಾವಿ, ರಾಜಶೇಖರ ಪಾಟೀಲ್ ಕೋಲಕುಂದಾ, ಭೀಮಾಶಂಕರ ಕೊಳ್ಳಿ, ಭೀಮರಾವ ಅಳ್ಳೊಳ್ಳಿ, ಹಫೀಜ್ ರಂಜೋಳ, ಸತೀಶ ಪೂಜಾರಿ, ಬಸಣ್ಣಗೌಡ ಮದ್ನಿ, ಶಂಭುರೆಡ್ಡಿ ನರಸಗೋಳ, ರಸೂಲ್ ಮುಲ್ಲಾ, ವೀರಣ್ಣಗೌಡ ಪರಸರೆಡ್ಡಿ, ಚನ್ನಬಸಪ್ಪ ಹಾಗರಗಿ, ಬಾಬುರಾವ ಪಾಟೀಲ್, ವೆಂಕಟರೆಡ್ಡಿ ಗುಂಡಳ್ಳಿ, ವಿಶ್ವನಾಥರೆಡ್ಡಿ ಪಾಟೀಲ್, ಶಿವಲಿಂಗಯ್ಯಸ್ವಾಮಿ ಗಚ್ಚಿನಮಠ, ಶರಣು ಡೋಣಗಾಂವ್, ಬಾಬಾ ಲಿಂಗಂಪಲ್ಲಿ, ಅನಂತರೆಡ್ಡಿ ಭೂತಪುರ, ವಿಶ್ವನಾಥ ಪಾಟೀಲ್, ಅಣವೀರಪ್ಪ ದೇಸಾಯಿ, ರುದ್ರು ಪಿಲ್ಲಿ, ಅನಂತಯ್ಯ ಮುಸ್ತಾಜರ್, ಶಿವರುದ್ರಪ್ಪ ಕೊಳಕೂರ ಇತರರಿದ್ದರು.
ಮಿನಿಸ್ಟರ್‌ಗೆ ಅದ್ದೂರಿ ಸ್ವಾಗತ: ಕ್ಷೇತ್ರದ ಶಾಸಕರೂ ಆದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರನ್ನು ಕೋಡ್ಲಾದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಮುಖ್ಯ ರಸ್ತೆಯಲ್ಲಿರುವ ಬಸ್ ನಿಲ್ದಾಣದಿಂದ ಬಜಾರ್ ಬಸವೇಶ್ವರ ದೇವಸ್ಥಾನದವರೆಗೆ ತೆರೆದ ವಾಹನದಲ್ಲಿ ಸಚಿವರನ್ನು ಕೂರಿಸಿ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಕಾರ್ಯಕರ್ತರು ಪುಷ್ಪವೃಷ್ಟಿ ಸುರಿದರು. ಕಾಂಗ್ರೆಸ್.. ಡಾ.ಪಾಟೀಲ್ ಪರ ಘೋಷಣೆ ಮೊಳಗಿದವು.
ರಾಜ್ಯದಲ್ಲಿ ಹಿಂದಿನ ಸರ್ಕಾರ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಲಿಲ್ಲ. ವ್ಯಾಪಕ ಭ್ರಷ್ಟಾಚಾರದ ಮೂಲಕ ರಾಜ್ಯದ ಮರ್ಯಾದೆ ಕಳೆದರು. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಜನ ವಿರೋಧಿಯಾಗಿದೆ. ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡವರ ಬದುಕಿನ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ
| ಡಾ.ಶರಣಪ್ರಕಾಶ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ
ಕೋಡ್ಲಾ ಜಿಲ್ಲಾ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಡಾ.ಶರಣಪ್ರಕಾಶ ಪಾಟೀಲ್ ಸಾಕಷ್ಟು ಶ್ರಮಿಸಿದ್ದಾರೆ. ಮುಂಬರುವ ದಿನಗಳಲ್ಲಿ ಗ್ರಾಮಕ್ಕೆ ಹೆಚ್ಚಿನ ಅನುದಾನ ನೀಡಿ, ಹಲವಾರು ಪ್ರಗತಿಪರ ಕೆಲಸಗಳನ್ನು ಮಾಡಲಿದ್ದಾರೆ ಎಂಬ ವಿಶ್ವಾಸವಿದೆ.
| ರವಿ ಸಾಹು ತಂಬಾಕೆ, ಕಾಂಗ್ರೆಸ್ ಮುಖಂಡ, ಕೋಡ್ಲಾ