ಜಿಲ್ಲೆ

ಲೈಂಗಿಕ ಕಿರುಕುಳ ನೀಡಿದವನ ವಿರುದ್ಧ ಪ್ರಕರಣ ದಾಖಲು

Haveri - Kariyappa Aralikatti

ಶಿಗ್ಗಾಂವಿ: ವಿದ್ಯಾಥಿರ್ನಿಯೊಬ್ಬಳಿಗೆ ಪ್ರೀತಿಸು ಎಂದು ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ತಾಲೂಕಿನ ತಡಸ ಪೊಲೀಸ್​ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ತಡಸ ಗ್ರಾಮದ ಇಮಾಮಹುಸೇನ ಮಹಬೂಬಅಲಿ ಮಹಲ್ದಾರ್​ (22) ಎಂಬುವನ ವಿರುದ್ಧ ದೂರು ದಾಖಲಾಗಿರುವುದು.

ಈತ ವಿದ್ಯಾಥಿರ್ನಿಗೆ ನೀನು ನನ್ನನ್ನು ಪ್ರೀತಿ ಮಾಡಬೇಕು. ಇಲ್ಲವಾದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಹೆದರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.