ಜಿಲ್ಲೆ

ಮಾಜಿ ಆಡಳಿತಾಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ದುರುದ್ದೇಶಪೂರ್ವಕ ಎಂದು ಪ್ರತಿಭಟನೆ..

ಕೋಲಾರ: ಇಟಿಸಿಎಂ ಕಾಲೇಜ್​ ಆಫ್ ನರ್ಸಿಂಗ್​​ನ ಮಾಜಿ ಆಡಳಿತಾಧಿಕಾರಿ ಜಾನ್ಸನ್ ಕುಂದಾರ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಆದರೆ ದುರುದ್ದೇಶಪೂರ್ವಕವಾಗಿ ಆರೋಪ ಹೊರಿಸಲಾಗಿದೆ ಎಂದು ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

ಇಟಿಸಿಎಂ ಆಡಳಿತಾಧಿಕಾರಿ ಜಾನ್ಸನ್ ಕುಂದಾರ್ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರ ವಿರುದ್ಧ ಕೋಲಾರದ ಬಂಗಾರಪೇಟೆ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ‌ ಮುಂದೆ‌ ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಸಂಘ ಪ್ರತಿಭಟನೆ ನಡೆಸಿದೆ.

ಇಟಿಸಿಎಂ ಆಸ್ಪತ್ರೆಯ ಆಡಳಿತಾಧಿಕಾರಿ ಶಾಂತಕುಮಾರ್ ಅವರು ದುರುದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳಿಂದ ದೂರು ಸಲ್ಲಿಸಿದ್ದಾರೆ. ಇಟಿಸಿಎಂ‌ ಆಸ್ಪತ್ರೆ ಮಾರಾಟ ಮಾಡಲು ಹುನ್ನಾರ ನಡೆಯುತ್ತಿದೆ. ಇದಕ್ಕೆ ಅಡ್ಡಲಾಗಿರುವ‌ ಜಾನ್ಸನ್ ಕುಂದಾರ್ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಲಾಗಿದೆ. ಹೀಗಾಗಿ ಶಾಂತಕುಮಾರ್ ಮೇಲೆ‌ ಕ್ರಮ ಕೈಗೊಳ್ಳುವಂತೆ‌ ಒತ್ತಾಯಿಸಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.