ಕಾಸರಗೋಡು: ಮಸೀದಿಗಿರುವ ಹಣ ಸಂಗ್ರಹಕ್ಕಾಗಿ ಮನೆಗೆ ತಲುಪಿ, ಬಾಲಕಿಯನ್ನು ಬಿಗಿದಪ್ಪಿ ಕಿರುಕುಳಕ್ಕೆ ಯತ್ನಿಸಿದಾತನನ್ನು ಊರವರು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ನೀಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಕ್ಕಾಡ್ ವೆಳ್ಳಚ್ಚೇರಿ ನಿವಾಸಿ ಖಾಲಿದ್ ಮುಸ್ಲಿಯಾರ್(59) ಬಂಧಿತ ಆರೋಪಿ. ಮಸೀದಿಯೊಂದಕ್ಕೆ ಹಣ ಸಂಗ್ರಹಕ್ಕೆಂದು ಆಗಮಿಸಿದ ಈತ, ಮನೆಯಲ್ಲಿ ಬೇರೆ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು, ಏಕಾಂಗಿಯಾಗಿದ್ದ ಒಂಬತ್ತರ ಹರೆಯದ ಬಾಲಕಿಯನ್ನು ಬಿಗಿದಪ್ಪಿಕೊಂಡಿದ್ದಾನೆ. ಬಾಲಕಿ ಬೊಬ್ಬಿಡುತ್ತಿದ್ದಂತೆ ಆಸುಪಾಸಿನವರು ಆಗಮಿಸಿದ್ದು, ಪರಾರಿಯಾಗಲೆತ್ನಿಸಿದ ಈತನನ್ನು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಮನೆಯವರು ನೀಡಿದ ದೂರಿನನ್ವಯ ಈತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.