ಕಾಸರಗೋಡು: ಮಹಿಳೆಗೆ ದೈಹಿಕ, ಮಾನಸಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಪತಿ ಹಾಗೂ ಮನೆಯವರ ವಿರುದ್ಧ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಳೆ ದೂರಿನ ಮೇರೆಗೆ ಕೇಸು ದಾಖಲಾಗಿದೆ. ಮಹಿಳೆ ವಿವಾಹ 2024 ಜೂನ್ 6ರಂದು ಬಂಟ್ವಾಳ ತಾಲೂಕಿನ ವಿಟ್ಲ ನಿವಾಸಿಯೊಂದಿಗೆ ನಡೆದಿದ್ದು, ಈ ಸಂದರ್ಭ 10 ಪವನ್ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಪತಿಯೊಂದಿಗೆ ವಿಟ್ಲದಲ್ಲಿ ವಾಸಿಸುತ್ತಿದ್ದ ಸಂದರ್ಭ ತನ್ನಗೆ ಮನೆಯೊಳಗೆ ದಿಗ್ಬಂಧನ ವಿಧಿಸಿ, ಲೈಂಗಿಕ ದೌರ್ಜನ್ಯ ನಡೆಸಿ, ದೈಹಿಕ ಹಿಂಸೆ ನೀಡಲಾಗಿದೆ. ಮತ್ತಷ್ಟು ಚಿನ್ನ ಹಾಗೂ ಹಣ ತಂದು ಕೊಡುವಂತೆ ಬೇಡಿಕೆಯೊಡ್ಡಿದ್ದಲ್ಲದೆ ನಗ್ನ ಫೋಟೋ ತೆಗೆದು ಮೊಬೈಲ್‌ನಲ್ಲಿರಿಸಿಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.