ಹುಬ್ಬಳ್ಳಿ: ನಗರದ ದಾಜೀಬಾನ ಪೇಟೆ ಶ್ರೀ ತುಳಜಾಭವಾನಿ ಮಂದಿರ ಆವರಣದಲ್ಲಿರುವ ಭಾರತೀಯ ಕಂಪ್ಯೂಟರ ಅಕಾಡೆಮಿಯಲ್ಲಿ ಆದರ್ಶ ಗಾರ್ಮೆಂಟ್ ಗುಂಪು ಅಭಿವೃದ್ಧಿ ಅಸೋಸಿಯೇಶನ್ ಸಹಯೋಗದೊಂದಿಗೆ 45 ದಿನಗಳ ಉಚಿತ ಯಾಂತ್ರಿಕೃತ ಹೊಲಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.
ಎಸ್ಎಸ್ಎಲ್ಸಿ ಪಾಸಾದ 18ರಿಂದ 35 ವರ್ಷದವರು ಪಾಲ್ಗೊಳ್ಳಬಹುದು. ತರಬೇತಿ ಪಡೆದು ಉತ್ತೀರ್ಣರಾದವರಿಗೆ ಕೇಂದ್ರ ಸರ್ಕಾರದ ಜವಳಿ ಸಚಿವಾಲಯದಿಂದ ಪ್ರಮಾಣ ಪತ್ರ ನೀಡಲಾಗುವುದು.
ಆಸಕ್ತರು, ಮಾ. 5ರ ಒಳಗೆ ಈ ಕೆಳಗಿನ ವಿಳಾಸದಲ್ಲಿ ಹೆಸರು ನೋಂದಾಯಿಸಬಹುದು ಎಂದು ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ ಜಿತೂರಿ ತಿಳಿಸಿದ್ದಾರೆ.
ಭಾರತೀಯ ಕಂಪ್ಯೂಟರ ಅಕಾಡೆಮಿ, ಶ್ರೀ ತುಳಜಾ ಭವಾನಿ ಟೆಂಪಲ್ ಕಾಂಪ್ಲೆಕ್ಸ, ದಾಜಿಬಾನ ಪೇಟ, ಹುಬ್ಬಳ್ಳಿ.