ಹುಬ್ಬಳ್ಳಿ: ನಗರದ ದಾಜೀಬಾನ ಪೇಟೆಯ ಶ್ರೀ ತುಳಜಾಭವಾನಿ ಮಂದಿರ ಆವರಣದಲ್ಲಿರುವ ಭಾರತೀಯ ಕಂಪ್ಯೂಟರ್ ಅಕಾಡೆಮಿಯಲ್ಲಿ ಆದರ್ಶ ಗಾರ್ಮೆಂಟ್ ಗುಂಪು ಅಭಿವೃದ್ಧಿ ಅಸೋಸಿಯೇಶನ್ ಸಹಯೋಗದೊಂದಿಗೆ 45 ದಿನಗಳ ಉಚಿತ ಯಾಂತ್ರಿಕೃತ ಹೊಲಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.
ಸಾಮಾನ್ಯ, ಒಬಿಸಿ, ಎಸ್ಸಿ ಎಸ್ಟಿ, ಅಲ್ಪಸಂಖ್ಯಾತರು ಸೇರಿ ಎಲ್ಲ ಜನಾಂಗದವರಿಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಎಸ್ಎಸ್ಎಲ್ಸಿ ಪಾಸಾದ 18ರಿಂದ 35ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
ತರಬೇತಿ ಪಡೆದು ಉತ್ತೀರ್ಣರಾದವರಿಗೆ ಕೇಂದ್ರ ಸರ್ಕಾರದ ಜವಳಿ ಸಚಿವಾಲಯದಿಂದ ಪ್ರಮಾಣ ಪತ್ರ ನೀಡಲಾಗುವುದು.
ಆಸಕ್ತರು, ಅಂಕಪಟ್ಟಿ ಅಥವಾ ಎಲ್ ಸಿ, ಆಧಾರ ಕಾರ್ಡ್ ಎರಡು ನಕಲು ಪ್ರತಿಗಳು, ಪಾಸ್ ಫೋರ್ಟ ಅಳತೆಯ ಐದು ಫೋಟೋಗಳುಳ್ಳ ದಾಖಲೆಗಳೊಂದಿಗೆ ಆ. 10ರ ಒಳಗೆ ಕೆಳಗಿನ ವಿಳಾಸದಲ್ಲಿ ಹೆಸರು ನೋಂದಾಯಿಸಬಹುದು.
ಭಾರತೀಯ ಕಂಪ್ಯೂಟರ ಅಕಾಡೆಮಿ, 1ನೇ ಮಹಡಿ, ತುಳಜಾ ಭವಾನಿ ಟೆಂಪಲ್ ಕಾಂಪ್ಲೆಕ್ಸ, ದಾಜಿಬಾನ ಪೇಟ, ಹುಬ್ಬಳ್ಳಿ.