ಜಿಲ್ಲೆ

ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ

Dharwada - Basavaraj Idli

ಹುಬ್ಬಳ್ಳಿ: ನಗರದ ರಾಜೇಂದ್ರ ಕಾಲನಿಯಲ್ಲಿ ಎಸ್.ಎಫ್.ಸಿ ಮುಕ್ತನಿಧಿ ಹಾಗೂ ಮಹಾನಗರ ಪಾಲಿಕೆಯ ಅನುದಾನದಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

ಶಾಸಕ ಮಹೇಶ ಟೆಂಗಿನಕಾಯಿ ಯಂತ್ರ ವಿತರಿಸಿ ಮಾತನಾಡಿ, ಪಾಲಿಕೆ ಸದಸ್ಯರು ಈ ವಾರ್ಡ್ ಗೆ ಹೆಚ್ಚಿನ ಸೌಲಭ್ಯಗಳನ್ನು ತರಲು ಪ್ರಯತ್ನಿಸಿದ್ದಾರೆ. ಹೊಲಿಗೆ ಯಂತ್ರಗಳನ್ನು ಸರಿಯಾಗಿ ಬಳಸಿಕೊಂಡು ಆರ್ಥಿಕವಾಗಿ ಸದೃಢಗೊಳ್ಳಬೇಕು ಎಂದು ಮಹಿಳೆಯರಿಗೆ ತಿಳಿಸಿದರು.

ಪಾಲಿಕೆ ಸದಸ್ಯ ಬೀರಪ್ಪ ಖಂಡೇಕರ, ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜು ಕಾಳೆ, ರವಿ ಡಂಬೋರ, ಪ್ರಮುಖರಾದ ಗಿರೀಶ ಗುಮಾಸ್ತೆ, ಕೃಷ್ಣ ಕುಲಕರ್ಣಿ, ಅಶೋಕ ವಾಲ್ಮೀಕಿ, ಪ್ರವಿಣ ಪವಾರ, ರಾಮನಗೌಡ ಶೆಟ್ಟನಗೌಡರ್, ರಘು ಹಬೀಬ, ಆನಂದ ಕಾಳೆ, ವೆಂಕಟೇಶ ಹಬೀಬ, ಶ್ರೀನಿವಾಸ ನಿಟ್ಟೂರು, ವೆಂಕಟೇಶ ದಿವಾನಗಿ, ಧೀರೇಂದ್ರ ಬಾಗಲಕೋಟೆ, ಎಸ್.ಎಸ್. ದೆಂಗಿ, ಸತೀಶ ಬೊಮ್ಮನಹಳ್ಳಿ, ಗಿರೀಶ ತಳವಾರ ಹಾಗೂ ಇತರರು ಉಪಸ್ಥಿತರಿದ್ದರು.