ಅಥಣಿ ತಾಲೂಕಿನ ಅನಂತಪುರ ಗ್ರಾಮದ ಬಸ್ ನಿಲ್ದಾಣದ ಬಳಿ ಕೊಳಚೆ ಪ್ರದೇಶದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ.  
ಜಿಲ್ಲೆ

ಕೊಳಚೆ ನೀರಿನಿಂದ ದುರ್ನಾತ

ಕೊಕಟನೂರ: ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಅಥಣಿ ತಾಲೂಕಿನ ಅನಂತಪುರ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕದ ಎದುರು ಕೊಳಚೆ ನೀರು ಸಂಗ್ರಹವಾಗಿ ವಾತಾವರಣ ಗಬ್ಬೆದ್ದಿದೆ.

ಗ್ರಾಮದ ಸುಮಾರು ನಾಲ್ಕು ಸಾವಿರ ಜನಸಂಖ್ಯೆ, ಬಸ್ ನಿಲ್ದಾಣದಿಂದ ಬೇರೆ ಗ್ರಾಮಕ್ಕೆ ಸಂಚರಿಸುವ ಜನರು ಮತ್ತು ಈ ಪ್ರದೇಶದಲ್ಲಿ ನಾಡ ಕಚೇರಿ ಇದ್ದು, ಕಚೇರಿಗೆ ಬರುವ ಬೇರೆ ಗ್ರಾಮದ ನೂರಾರು ಜನರು ಈ ಶುದ್ಧ ಕುಡಿಯುವ ನೀರಿನ ಘಟಕದ ಎದುರಿನಲ್ಲಿರುವ ಕೊಳಚೆ ತಾಣದ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿನ ನೀರು ಬಳಸುತ್ತಾರೆ. ನಾಲ್ಕು ತಿಂಗಳಿಂದ ಬಡಾವಣೆಯಿಂದ ಬರುವ ಕೊಳಚೆ ನೀರು ಹಾಗೂ ಘಟಕದ ತ್ಯಾಜ್ಯ ನೀರು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ಇರುವುದರಿಂದ ಘಟಕದ ಎದುರಿನಲ್ಲಿಯೇ ಕೊಳಚೆ ನೀರು ಸಂಗ್ರಹವಾಗುತ್ತಿವೆ. ಅದನ್ನು ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಹಲವು ಬಾರಿ ತಿಳಿಸಿದರೂ ಇಲ್ಲಿಯವರೆಗೆ ಯಾರೂ ಗಮನ ಹರಿಸಿಲ್ಲ.

ಕೊಳಚೆಯಿಂದ ಈ ಪ್ರದೇಶದಲ್ಲಿ ಗಬ್ಬು ವಾಸನೆ ಎದ್ದಿದೆ. ಈ ಪ್ರದೇಶದಲ್ಲಿರುವ ವಯೋವೃದ್ಧರು ಸಾಂಕ್ರಾಮಿಕ ರೋಗದಿಂದ ಬಳಲುವಂತಾಗಿದೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷೃ ಧೋರಣೆಗೆ ಗ್ರಾಮಸ್ಥರು ತೀವ್ರ ಖಂಡಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ತಾಲೂಕಾಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಅನಂತಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಸಮಸ್ಯೆ ಬಗೆಹರಿಸಲು ಪಿಡಿಒಗೆ ಸೂಚಿಸಲಾಗುವುದು.| ರವೀಂದ್ರ ಬಂಗಾರೆಪ್ಪನವರ ತಾಪಂ ಇಒ ಅಥಣಿಎರಡ್ಮೂರು ದಿನಗಳಲ್ಲಿ ಇಲ್ಲಿಯ ಕೊಳಚೆ ಸಮಸ್ಯೆ ಬಗೆಹರಿಸಬೇಕು. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಹೋರಾಟ ನಡೆಸಲಾಗುವುದು.| ಶಿವಾನಂದ ಬುರ್ಲಿ ಅನಂತಪುರ ಗ್ರಾಮಸ್ಥ

| ಮೋಹನ ಪಾಟಣಕರ ಕೊಕಟನೂರ