ವಿಜಯವಾಣಿ ಸುದ್ದಿಜಾಲ ಧಾರವಾಡ
ಮಳೆಗಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆ ಸುತ್ತ ಸ್ವಚ್ಛತೆ ಕಾಪಾಡುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು, ಅಧಿಕಾರಿಗಳೊಂದಿಗೆ ಜಾಗೃತಿ ರ‍್ಯಾಲಿ ನಡೆಸಿದ್ದಾರೆ. ನಗರದ ಕೆಲವೆಡೆ ರಸ್ತೆ ಮೇಲೆ ಒಳಚರಂಡಿ ನೀರು ಹರಿಯುತ್ತಿದ್ದರೂ ಸಂಬ0ಧಪಟ್ಟವರ ಗಮನಕ್ಕೆ ಬಂದಿಲ್ಲ.
ಧಾರವಾಡ ಕಲಘಟಗಿ ರಸ್ತೆಯ ಅಕ್ಕಪಕ್ಕ 4 ಮ್ಯಾನ್‌ಹೋಲ್‌ಗಳು ತುಂಬಿ ಹರಿಯುತ್ತಿವೆ. ಸಾರಸ್ವತಪುರ ಬಸ್ ತಂಗುದಾಣದ ಬಳಿ ಗಲೀಜು ರಸ್ತೆ ಮೇಲೆ ಹರಿಯುತ್ತಿದೆ. ಪಕ್ಕದಲ್ಲೇ ಆಟೋ ನಿಲ್ದಾಣ, ಬಸ್ ತಂಗುದಾಣಗಳಿವೆ. ಸಾರ್ವಜನಿಕರು, ವಿದ್ಯಾರ್ಥಿಗಳು ಬಸ್‌ಗಾಗಿ ಕಾದು ನಿಲ್ಲುತ್ತಾರೆ. ಒಳಚರಂಡಿ ನೀರಿನಿಂದ ಗಬ್ಬು ವಾಸನೆ ಹರಡುತ್ತಿದೆ. ಈ ವಾತಾವರಣ ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗಿದ್ದು, ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.