ಜಿಲ್ಲೆ

ಕಟ್ಟಿಗೇನಹಳ್ಳಿ ಕೆರೆಗೆ ಕೊಳಚೆ ನೀರು

Mandara

ಬೆಂಗಳೂರು: ಕಟ್ಟಿಗೇನಹಳ್ಳಿ (ಪಾಲನಹಳ್ಳಿ) ಕೆರೆಯ ಒಳಹರಿವು ಕಾಲುವೆಗೆ ನಿರ್ವಿುಸಿರುವ ಸಿಲ್ಟ್ ಟ್ರಾಪ್​ನ ತಡೆಗೋಡೆಯನ್ನು ಕೆಲವರು ಒಡೆದುಹಾಕುವ ಮೂಲಕ ಕೊಳಚೆ ನೀರು ಕೆರೆಗೆ ಸೇರುವಂತೆ ಮಾಡುತ್ತಿದ್ದಾರೆ. ಕೆರೆಯನ್ನು ಪಾಲಿಕೆ ಅಭಿವೃದ್ಧಿ ಮಾಡುತ್ತಿದೆ. ಕೆರೆಗೆ ಕೊಳಚೆ ನೀರು ಹರಿದು ಹೋಗದಂತೆ ಸಿಲ್ಟ್ ಟ್ರಾಪ್​ನಲ್ಲಿ ತಡೆಗೋಡೆ ನಿರ್ವಿುಸಲಾಗಿದೆ. ಕೆರೆಯಲ್ಲಿ ಸದಾಕಾಲ ನೀರು ಇರಬೇಕು. ಇಲ್ಲದಿದ್ದರೆ ಬಾವಿ ಮತ್ತು ಬೋರ್​ವೆಲ್​ಗಳು ಬತ್ತಿ ಹೋಗುತ್ತವೆ ಎಂದು ಗ್ರಾಮಸ್ಥರು ಕೊಳಚೆ ನೀರಿನ ಅಡ್ಡಗೋಡೆ ಒಡೆಯುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗುತ್ತಾರೆ ಎಂದು ದೂರಲಾಗಿದೆ.