ವಿಟ್ಲ: ಕೇರಳದ ಕಾಸರಗೋಡಿನಿಂದ ಆಸ್ಪತ್ರೆ ತ್ಯಾಜ್ಯವನ್ನು ಕರ್ನಾಟಕ ವಾಹನ ಮೂಲಕ ಕರ್ನಾಟಕಕ್ಕೆ ತಂದು ನಿರ್ಜನ ಪ್ರದೇಶದಲ್ಲಿ ಸುರಿದು ಹೋಗುತ್ತಿರುವ ದಂಧೆಯನ್ನು ಕಲ್ಲಡ್ಕ ಕಾಂಞಂಗಾಡು ಹೆದ್ದಾರಿಯ ಉಕ್ಕುಡದಲ್ಲಿ ಸಾರ್ವಜನಿಕರು ಬುಧವಾರ ಪತ್ತೆ ಹಚ್ಚಿದ್ದಾರೆ.
ಕೆಲವೇ ದಿನಗಳನ್ನು ವಾಹನವನ್ನು ಬಿಡಿಸಿಕೊಂಡು ಬಂದು ಈಗ ಮತ್ತೆ ಕಾಸರಗೋಡು ಆಸ್ಪತ್ರೆಯಿಂದ ತ್ಯಾಜ್ಯವನ್ನು ತುಂಬಿ ಕರ್ನಾಟಕ ಬರುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ವಾಹನವನ್ನು ಬೆನ್ನಟ್ಟಿ ಬಂದಿದ್ದಾರೆನ್ನಲಾಗಿದೆ. ಉಕ್ಕುಡದಲ್ಲಿ ವಾಹನವನ್ನು ಸಾರ್ವಜನಿಕರು ತಡೆಗಟ್ಟಿ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ವಾರದಿಂದ ಹಲವು ಬಾರಿ ತ್ಯಾಜ್ಯವನ್ನು ತಂದಿರುವುದಾಗಿ ಚಾಲಕ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದ್ದಾರೆ.