ಭಾರತೀಯ ಜೀವ ವಿಮಾ ನಿಗಮದ ಮದ್ದೂರು ಮುಖ್ಯ ವಿಮಾ ಸಲಹೆಗಾರ ಸಿ.ಎನ್.ಧನಪಾಲಶೆಟ್ಟಿ ಪ್ರಸ್ತುತ ಸಾಲಿನಲಿ 44.47 ಲಕ್ಷ ರೂ. ಪ್ರೀಮಿಯಂ ಪೂರ್ಣಗೊಳಿಸುವ ತಾಲೂಕಿಗೆ ಮೊದಲಿಗರಾಗಿರುವುದರಿಂದ ಇವರನ್ನು ಪ್ರಾದೇಶಿಕ ವ್ಯವಸ್ಥಾಪಕ ಜಯಸಿಂಹನ್ ಸನ್ಮಾನಿಸಿದರು. ಕೆ.ರಾಜನ್, ಸುಧಾಕರ್‌ಶೆಟ್ಟಿ, ಸೋಮಶೇಖರ್, ರುದ್ರಣ್ಣ, ಜಯರಾಮು ಇದ್ದರು. 
ಜಿಲ್ಲೆ

ಮದ್ದೂರು ಜೀವ ವಿಮಾ ನಿಗಮದಲ್ಲಿ ಹಲವಾರು ದಾಖಲೆ

ಮದ್ದೂರು: ಭಾರತೀಯ ಜೀವ ವಿಮಾ ನಿಗಮದ ಮದ್ದೂರು ಮುಖ್ಯ ವಿಮಾ ಸಲಹೆಗಾರ ಸಿ.ಎನ್.ಧನಪಾಲಶೆಟ್ಟಿ ಪ್ರಸ್ತುತ ಸಾಲಿನಲ್ಲಿ 366 ಪಾಲಿಸಿಗಳಿಂದ 44.47 ಲಕ್ಷ ರೂ. ಪ್ರೀಮಿಯಂ ಪೂರ್ಣಗೊಳಿಸುವ ತಾಲೂಕಿಗೆ ಮೊದಲಿಗರಾಗಿದ್ದಾರೆಂದು ಪ್ರಾದೇಶಿಕ ವ್ಯವಸ್ಥಾಪಕ ಜಯಸಿಂಹನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಜೀವ ವಿಮಾ ಕಚೇರಿಯಲ್ಲಿ ಸೋಮವಾರ ಧನಪಾಲಶೆಟ್ಟಿ ಅವರನ್ನು ಅಭಿನಂದಿಸಿ ಮಾತನಾಡಿಸಿದರು. ಧನಪಾಲಶೆಟ್ಟಿ ತಾಲೂಕಿನ ಚಿಕ್ಕರಸಿನಕೆರೆ ಗ್ರಾಮದ ಮಿಠಾಯಿ ನಾರಾಯಣಶೆಟ್ಟಿ-ಲಕ್ಷ್ಮಮ್ಮ ದಂಪತಿ ಪುತ್ರನಾಗಿ ಗ್ರಾಮಾಂತರ ಪ್ರದೇಶದಲ್ಲಿ ಜನಿಸಿ 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸುವ ಮೂಲಕ ವಿಮಾ ನಿಗಮದಲ್ಲಿ ಹಲವಾರು ದಾಖಲೆಗಳನ್ನು ಮಾಡಿದ್ದಾರೆ. ಇವರು ವಿಮಾ ರಂಗದಲ್ಲಿ ಮತ್ತಷ್ಟು ದಾಖಲೆಗಳನ್ನು ಮಾಡಿ ಪಾಲಿಸಿದಾರರಿಗೆ ಸಾಕಷ್ಟು ಅನುಕೂಲಗಳನ್ನು ಕಲ್ಪಿಸಲಿ ಎಂದು ಹಾರೈಸಿದರು.

ವಿಮಾ ನಿಗಮ ಮುಖ್ಯ ಪ್ರಬಂಧಕ ಕೆ.ರಾಜನ್, ಎಸ್.ಒ.ಶಾಖೆಯ ವ್ಯವಸ್ಥಾಪಕ ಸುಧಾಕರ್‌ಶೆಟ್ಟಿ, ಉಪ ಶಾಖಾಧಿಕಾರಿಗಳಾದ ಸೋಮಶೇಖರ್, ರುದ್ರಣ್ಣ, ಪ್ರತಿನಿಧಿ ಸಂಘದ ಅಧ್ಯಕ್ಷ ಅನೆದೊಡ್ಡಿ ಜಯರಾಮು, ಸದಸ್ಯರಾದ ಕೆ.ಕೆಂಪರಾಜು, ಸಿ.ವಾಸು ಇದ್ದರು.