ರಾಯಚೂರು ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ವ್ಯೆಯಕ್ತಿಕ ಕಾರಣದಿಂದ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಜಗಳ ಬಿಡಿಸಲು ಹೋದ ಪಿಎಸ್‌ಐ ಸೇರಿ ಹಲವರಿಗೆ ಕಾರದಪುಡಿ ಎರಚಿದ ಘಟನೆ ನಗರದ ವೀರಾಂಜನೇಯ ಕಲ್ಯಾಣ ಮಂಟದ ಹತ್ತಿರ ಸೋಮವಾರ ನಡೆದಿದೆ.
ಭಾನುವಾರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಿದ್ದು, ವ್ಯೆಯಕ್ತಿಕ ಕಾರಣದಿಂದ ಬಿಜೆಪಿ ಮುಖಂಡ ಯು. ನರಸರೆಡ್ಡಿ ಮತ್ತು ಡ್ಯಾಡಿ ವೀರೇಶ ಕುಟುಂದ ಯುವಕರ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ನಂತರ ಜಗಳ ವಿಕೋಪಕ್ಕೆ ತೆರಳಿ ಹೊಡೆದಾಡಿಕೊಂಡಿದ್ದಾರೆ. ಖಾರದಪುಡಿ ಯೊಂದಿಗೆ ಘರ್ಷಣೆಗೆ ಇಳಿದಾಗ ಪರಿಸ್ಥಿತಿ ತಿಳಿಗೊಳಿಸಲು ಬಂದ ಮಾರ್ಕೆಟ್ ಯಾರ್ಡ್ ಠಾಣೆಯ ಪಿಎಸ್‌ಐ ಮಹ್ಮದ್ ಇಸಾಕ್ ಅವರ ಕಣ್ಣಿಗೆ ಕಾರದ ಪುಡಿ ಎರಚಿ ಕಲ್ಲು ತೂರಾಟ ನಡೆಸಲಾಗಿದೆ.
ಪರಸ್ಥಿತಿ ಉದ್ವಿಗ್ನಗೊಂಡ ಪರಿಣಾಮವಾಗಿ ಪೋಲಿಸರು ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಗಲಾಟೆಯಲ್ಲಿ 4 ಜನರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಗುಂಪುಗಳ ಮಧ್ಯೆ ಗಲಾಟೆಯಿಂದಾಗಿ ಪರಸ್ಥಿತಿ ಮಿತಿ ಮೀರಿದ್ದರಿಂದ ಪೊಲೀಸರನ್ನು ನಿಯೊಜನೆ ಮಾಡಲಾಗಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.
ನಗರದ ವೀರಾಂಜನೇಯ ಕಲ್ಯಾಣ ಮಂಟಪದ ಹತ್ತಿರ ವ್ಯೆಯಕ್ತಿಕ ಕಾರಣದಿಂದ ಎರಡುಗುಂಪುಗಳ ನಡುವೆ ಜಗಳವಾಗಿದ್ದು, ಅನೇಕರಿಗೆ ಗಾಯಗಳಾಗಿವೆ. ಜಗಳ ನಿಯಂತ್ರಣ ಮಾಡಲು ಹೋದ ಪೊಲೀಸರಿಗೆ ಕಾರದಪುಡಿ ಎರಚಿದ್ದಾರೆ. ಈ ಕುರಿತು ಎರಡು ಗುಂಪುಗಳ ವಿರುದ್ಧ ಪೊಲೀಸ್ ಇಲಾಖೆಯಿಂದ ಸ್ವಯಂ ದೂರು ದಾಖಲು ಮಾಡಿಕೊಳ್ಳಲಾಗುತ್ತದೆ. ಪುಟ್ಟಮಾದಯ್ಯ ಎಂ. ಎಸ್ಪಿ ರಾಯಚೂರು.