ಜಿಲ್ಲೆ

ಜೂಜಾಡುತ್ತಿದ್ದ ಏಳು ಮಂದಿ ಬಂಧನ

ರೇಷ್ಮೆ ನಗರ ಡೆಸ್ಕ್

ಕನಕಪುರ: ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ತಾಲೂಕಿನ ಹುಣಸನಹಳ್ಳಿ ಸಮೀಪದ ಹುಣಸನಕೋಡಿಹಳ್ಳಿ ಮನೆಯೊಂದರಲ್ಲಿ ಜೂಜಾಡುತ್ತಿದ್ದ 7 ಮಂದಿಯನ್ನು ಕೋಡಿಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಣಸನಕೋಡಿಹಳ್ಳಿ ಗೂನು ಮಾದಪ್ಪನವ ಮನೆಯಲ್ಲಿ ಕೆಲ ತಿಂಗಳಿಂದ ಜೂಜು ನಡೆಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಸಬ್​ಇನ್​ಸ್ಪೆಪೆಕ್ಟರ್​ ಪ್ರದಿಪ್​ಕುಮಾರ್​ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ, ಗೂನು ಮಾದಪ್ಪ, ಲೋಕೇಶ್​, ಅನ್ವರ್​, ಪುಟ್ಟಸ್ವಾಮಿ ಸೇರಿ ಏಳು ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.