ಆಲೂರು: ತಾಲೂಕಿನ ಮಗ್ಗೆ ಗ್ರಾಮದ ಸಮೀಪದ ಇಸ್ಪೀಟ್ ಆಡುತ್ತಿದ್ದ ಗುಂಪಿನ ಮೇಲೆ ಹಾಸನ ಹಾಗೂ ಆಲೂರು ಪೊಲೀಸರು ಭಾನುವಾರ ದಾಳಿ ನಡೆಸಿ ಏಳು ಜನರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 7 ಜನರನ್ನು ಬಂಧಿಸಿ 22,575 ರೂ. ನಗದು ವಶಪಡಿಸಿಕೊಂಡಿದ್ದಾರೆ. ರಾಜಸುಧನ್ ಕಲ್ಲಾರೆ, ಮಧು ಕಾಗನೂರು, ಯೋಗೇಶ್ ಮಾದಿಹಳ್ಳಿ, ಪರಮೇಶ್ ಸಿರಗಾವರ, ವಿರುಪಾಕ್ಷ ಹುಸ್ಕೂರು, ತ್ಯಾಗರಾಜ್ ಹೊನ್ನವಳ್ಳಿ, ಸುರೇಶ್ ಮೆರ್ವೆ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆಲೂರು ಪಟ್ಟಣ ಸುತ್ತಮುತ್ತಲ ನಿರ್ಜನ ಪ್ರದೇಶಗಳಲ್ಲಿ ಅಕ್ರಮವಾಗಿ ಇಸ್ಪೀಟ್ ದಂಧೆ ನಡೆಯುತ್ತಿರುವ ಬಗ್ಗೆ ಹಲವು ದಿನಗಳಿಂದ ದೂರಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಆಲೂರು ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಮೋಹನ್ ರೆಡ್ಡಿ ಅನುಮಾನ ಇರುವ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ದಾಳಿ ವೇಳೆ ಆಲೂರು ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಮೋಹನ್ ರೆಡ್ಡಿ, ಹಾಸನ ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ಗಳಾದ ಪಾಲಾಕ್ಷ, ಪ್ರಭು, ಸಿಬ್ಬಂದಿ ಹಾಜರಿದ್ದರು.