ನಾಪೋಕ್ಲು: ಆಂಧ್ರಪ್ರದೇಶದ ಕಡಪದಲ್ಲಿ ಜುಲೈ 10 ರಿಂದ 17ವರೆಗೆ ನಡೆಯುವ ಎರಡನೇ ಹಾಕಿ ಇಂಡಿಯಾ ದಕ್ಷಿಣ ವಲಯ ಚಾಂಪಿಯನ್ಶಿಪ್ ಜೂನಿಯರ್ ಕರ್ನಾಟಕ ತಂಡಕ್ಕೆ ಕೊಡಗಿನ ಏಳು ಮಂದಿ ಆಟಗಾರರು ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಈ ತಂಡದಲ್ಲಿ ಕೊಡಗಿನ ಕ್ರೀಡಾಪಟುಗಳಿಗೆ ಹೆಚ್ಚಿನ ಸ್ಥಾನ ಲಭಿಸಿದೆ. ಈ ನೂತನ ತಂಡದಲ್ಲಿ ನಾಪೋಕ್ಲು ಗ್ರಾಮದ ಬಿದಾಟ್ಟಂಡ ಬೋಪಣ್ಣ, ಬಿದಾಟ್ಟಂಡ ಅಖಿಲ್, ಕುಲ್ಲೆಟೀರ ವಚನ್ ಮತ್ತು ಕಕ್ಕಬೆ ಯವಕಪಾಡಿ ಗ್ರಾಮದ ಚೊಯಮಾಡ ಆಕಾಶ್ ಬಿದ್ದಪ್ಪ, ವಿರಾಜಪೇಟೆಯ ತೀತಮಾಡ ಯಶ್ವಥ್, ಹೃತಿಕ್ ಅಯ್ಯಪ್ಪ ಹಾಗೂ ಅಶ್ವಥ್ ಆಯ್ಕೆಯಾಗಿದ್ದಾರೆ.