ಹುಬ್ಬಳ್ಳಿ: ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಮಹಿಳೆಯರ ಅರೋಗ್ಯವೂ ಪ್ರಮುಖವಾಗಿದೆ. ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂಥ ಮಹಿಳೆಯರಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ನಿಮಿರ್ಸಲು ಸಾಧ್ಯ ಎಂದು ಡಾ. ಸಂಗೀತಾ ಅಂಟರತಾನಿ ಹೇಳಿದರು.
ಇಲ್ಲಿನ ಸೇವಾ ಭಾರತಿ ಟ್ರಸ್ಟ್ ಬಾಲ ಕಲ್ಯಾಣ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಅತಿಥಿಗಳಾಗಿ ಮಾತನಾಡಿದರು.
ಮಹಿಳೆಯರು ತಮ್ಮ ನಿತ್ಯದ ಕಾರ್ಯ, ಒತ್ತಡಗಳ ನಡುವೆಯೂ ಯೋಗ, ನಡಿಗೆ, ವ್ಯಾಯಾಮಗಳಿಗೆ ಸ್ವಲ್ಪ ಸಮಯ ಮೀಸಲಿಡಬೇಕು. ಪೌಷ್ಠಿಕ ಆಹಾರ ಸೇವಿಸಬೇಕು. ವಿಶ್ರಾಂತಿ ಪಡೆಯಬೇಕು.
ಮಹಿಳೆಯರು ನೆಮ್ಮದಿ, ಆರೋಗ್ಯವಂತರಾಗಿ ಇದ್ದಾಗ ಮಾತ್ರ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ನಿಗಾ ವಹಿಸಿ, ಅಗತ್ಯ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.
ಬಾಲಕಲ್ಯಾಣ ಕೇಂದ್ರದ ಅಧ್ಯೆ ಕಮಲಾ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ಯಾವುದರಲ್ಲೂ ಕಡಿಮೆಯಿಲ್ಲ, ತಾವು ಅಬಲೆಯರಲ್ಲ, ಸಬಲೆಯರು ಎಂದು ನಿರೂಪಿಸಬೇಕು, ಇದಕ್ಕಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಮಹಿಳೆಯರಿಗಾಗಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಆಶಾ ಚೌದರಿ ಪ್ರಾಥಿರ್ಸಿದರು. ಹಷಿರ್ತಾ ನಿರೂಪಿಸಿದರು. ಭಾರತಿ ನಂದಕುಮಾರ, ಮಾತಾಜಿ ರತ್ನಾ, ವೀಣಾ ಎಂ, ಶೈಲಾ ಶೆಟ್ಟರ, ಮುಂತಾದವರು ಭಾಗವಹಿಸಿದ್ದರು.