ಜಿಲ್ಲೆ

ವಿವಿಧ ಕ್ಷೇತ್ರದ ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ

ಆರ್.ಕೃಷ್ಣ

ಮೈಸೂರು: ನೂತನವಾಗಿ ಆರಂಭವಾದ ಹೊಸಬೆಳಕು ಸೇವಾ ಟ್ರಸ್ಟ್‌ಗೆ ಚಾಲನೆ ನೀಡಲಾಯಿತು. ವಿವಿಧ ಕ್ಷೇತ್ರದ ಸಾಧಕರಿಗೆ ಸೇವ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಿಜೆಪಿ ನಗರ ಅಧ್ಯಕ್ಷ ಎಲ್.ನಾಗೇಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಿಸ್ವಾರ್ಥ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಮೂಲಕ ಸಂಘ ಸಂಸ್ಥೆಗಳ ಸ್ಥಾಪನೆಯ ಸದುದ್ದೇಶ ಈಡೇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸೇವಾ ಮನೋಭಾವ ಇದ್ದಲ್ಲಿ ಮಾತ್ರ ಸಂಘ ಸಂಸ್ಥೆಗಳ ಕಾರ‌್ಯ ಚಟುವಟಿಕೆಗಳು ಸಾರ್ವಜನಿಕರಿಗೆ ತಲುಪಲು ಸಾಧ್ಯವಾಗಲಿದೆ. ಆದ್ದರಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿ ಶ್ರೀನಿವಾಸ್, ಹೊಸಬೆಳಕು ಸೇವಾ ಟ್ರಸ್ಟ್ ಸಂಸ್ಥಾಪಕಿ ಎಂ.ಎನ್.ಗೀತಾ ಶಿವಪ್ರಸಾದ್, ಬಿಜೆಪಿ ರಾಜ್ಯ ವಕ್ತಾರ ಎಂ.ಜೆ. ಮಹೇಶ್ ಇತರರು ಇದ್ದರು.

ಕರಾಟೆ ಮಾಸ್ಟರ್ ದಿಲೀತ್ತು ಉತ್ತಪ್ಪ , ರಕ್ತದಾನಿ ಮಹದೇವಸ್ವಾಮಿ, ಖೋಖೋ ಆಟಗಾರ್ತಿ ಚೈತ್ರಾ, ಪೊಲೀಸ್ ಇಲಾಖೆಯ ದಿವಾಕರ್, ಕಲಾವಿದೆ ಗೌರಿ, ಸಮಾಜ ಸೇವಕರಾದ ಪ್ರಭಾಮಣಿ, ಮಾದೇವಯ್ಯ, ಕಾಂತರಾಜು, ಮಾಲಂಬಿಕಾ, ಸೌಮ್ಯಾ, ರವಿ, ಇಬ್ರಾಹಿಂ ರಫೀಕ್ ಸನ್ಮಾನ ಸ್ವೀಕರಿಸಿದರು.