ವಿಜಯವಾಣಿ ಸುದ್ದಿಜಾಲ ಗದಗ
ಪುಟ್ಟರಾಜ ಕವಿ ಗವಾಯಿಗಳವರ ಸಾಹಿತ್ಯವೆಂದರೇ ಲಿಂಗ ಸಾಹಿತ್ಯ ಎಂದು ಪುಟ್ಟರಾಜ ಸೇವಾ ಸಮಿತಿ ರಾಜ್ಯಾಧ್ಯಕ್ಷ ಚನ್ನವಿರಸ್ವಾಮಿ ಹಿರೇಮಠ ಹೇಳಿದರು.
ಕಲಬುರಗಿಯ ಕನ್ನಡ ಸಾಹಿತ್ಯ ಪರಿಷತ್ತಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸೇವಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಟ್ಟರಾಜರು ಲಿಂಗ ಪೂಜೆ ಸಮಯದಲ್ಲಿ ಕೃತಿಗಳನ್ನು ರಚಿಸುತ್ತಿದ್ದರು. ಶರಣರು ಹೇಳಿದಂತೆ "ಲಿಂಗ ಮೆಚ್ಚಿ ಹೌದು ಹೌದು ಎನ್ನಬೇಕು' ಎನ್ನುವಂತೆ ಪುಟ್ಟರಾಜರ ಸಾಹಿತ್ಯ ಲಿಂಗ ಮೆಚ್ಚಿದ ಸಾಹಿತ್ಯವಾಗಿದೆ. ಬಹಿರಂಗದಲ್ಲಿ ದೃಷ್ಠಿ ಇಲ್ಲದಿದ್ದರೂ ಅಂತರದೃಷ್ಟಿಯಿಂದ ಕನ್ನಡ, ಹಿಂದಿ ಮತ್ತು ಸಂಸತ ತ್ರಿಭಾಷೆಯಲ್ಲಿ ನೂರಾರು ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುಗಿರ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಮಾತನಾಡಿ, ಸುಮಾರು ಹತ್ತು ಜನರಿಗೆ ಪುಟ್ಟರಾಜರ ಗುರು ವಚನ ಪ್ರಭಾ ಕೃತಿಗಳನ್ನು ಸಾಂಕೇತಿಕವಾಗಿ ವಿತರಿಸಿ ಪುಟ್ಟರಾಜರ ಸಾಹಿತ್ಯ ಪ್ರಚಾರ ಮಾಡುವ ಅವಶ್ಯಕತೆ ಇದೆ. ಈ ಗ್ರಂಥ ದಾಸೋಹ ಸೇವೆ ಕೈಗೆತ್ತಿಕೊಂಡ ಸೇವಾ ಸಮಿತಿಯ ಕಾರ್ಯಾ ಶ್ಲಾನೀಯ ಎಂದರು. ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ರೇವಯ್ಯ ವಸ್ತ್ರದಮಠ, ದಯಾನಂದಸ್ವಾಮಿ ಹಿರೇಮಠ, ಸಿದ್ಧಣ್ಣ ದೇಸಾಯಿ, ಅಮರಪ್ರಿಯ ಹಿರೇಮಠ, ಶಿವ ಶಂಕರ ಬಿರಾದಾರ, ಬಾಬುರಾವ್ ಖೋಬಾಳ ಅವರನ್ನು ಸನ್ಮಾನಿಸಲಾಯಿತು.
ಅಣವಿರಯ್ಯ ಪ್ಯಾಟಿಮನಿ, ಜಗದೀಶ ಮರಪಳ್ಳಿ, ವಿಜಯ ಕುಮಾರ ಪರುತೆ, ಮಡಿವಾಳಯ್ಯ ಹಿರೇಮಠ ಕೊರಳ್ಳಿ ಉಪಸ್ಥಿತರಿದ್ದರು.