ಹುಬ್ಬಳ್ಳಿ; ಸೇವೆ ಎನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ, ಮನೆಯಲ್ಲಿ ಯಾರಿಗಾದರೂ ತೊಂದರೆಯಾದಾಗ ಇತರ ಎಲ್ಲ ಸದಸ್ಯರು ಸ್ಪಂದಿಸುತ್ತಾರೆ. ಹಾಗಾಗಿ, ಕುಟುಂಬದಿಂದ ಇದನ್ನು ನಾವು ಕಲಿತುಕೊಳ್ಳುತ್ತೇವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂದ ಕ್ಷೇತ್ರ ಕಾರ್ಯವಾಹ ಎನ್. ತಿಪ್ಪೆಸ್ವಾಮಿ ಹೇಳಿದರು.
ಇಲ್ಲಿಯ ಶ್ರೀನಿವಾಸ ಗಾರ್ಡನ್ ನಲ್ಲಿ ಬುಧವಾರ ಏರ್ಪಡಿಸಿದ್ದ ಸೇವಾ ಭಾರತಿ ಟ್ರಸ್ಟ್‌ನ ಸೇವಾ ಭಾರತಿ ರಜತ ಮಹೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಸೇವೆ ಹಾಗೂ ತ್ಯಾಗ ಇವು ಸಮಾಜದ ಸಂಸ್ಕೃತಿಯನ್ನು ತೋರಿಸುತ್ತವೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಸಮಾಜದಲ್ಲಿ ನಾವೆಲ್ಲರೂ ಸಹೋದರರು ಎಂಬ ಭಾವನೆ ಹಾಗೂ ಯಾರಿಗಾದರೂ ಸಮಸ್ಯೆಯಾದಾಗ ಅವರ ಸೇವೆಗೆ ಧಾವಿಸಬೇಕು, ಪರಿಹಾರ ಮಾಡಲು ಶ್ರಮಿಸಬೇಕು. ಸಮಾಜದಲ್ಲಿನ ದುರ್ಬಲರು, ನೊಂದು ಬೆಂದವರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡಬೇಕು. ಅದು ಸೇವೆ ಎನಿಸಿಕೊಳ್ಳುತ್ತದೆ ಎಂದರು.
ಇಂತಹ ಸೇವಾ ಕಾರ್ಯವನ್ನು ಸೇವಾ ಭಾರತಿ, ಆರ್ ಎಸ್ ಎಸ್ ಮುಂತಾದ ಸಂಘಟನೆಗಳು ಅವಿರತವಾಗಿ ಮಾಡುತ್ತ ಬಂದಿವೆ. ಆದರೆ, ಎಲ್ಲಿಯೂ ಹೇಳಿಕೊಂಡಿಲ್ಲ ಎಂದರು.
ಸದೃಢ ಸಮಾಜ ನಿರ್ಮಾಣ ಮಾಡಬೇಕಾದರೆ ದೀನರು, ತಳಮಟ್ಟದಲ್ಲಿ ಇರುವವರನ್ನು ಮೇಲೆತ್ತಬೇಕಾಗಿದೆ. ಸಮಾಜದಲ್ಲಿ ಈಗಲೂ ಮೇಲು& ಕೀಳು ಎಂಬ ಭಾವನೆ ಇದೆ. ಅಸ್ಪ--ೃಶ್ಯತೆ ಕಂಡು ಬರುತ್ತದೆ. ಇದನ್ನು ತೊಡೆದು ಹಾಕಬೇಕಾಗಿದೆ. ಈ ದಿಸೆಯಲ್ಲಿ ಸೇವಾ ಕಾರ್ಯಗಳು ನಡೆಯಬೇಕು ಎಂದು ಹೇಳಿದರು.
ಅತಿಥಿಯಾಗಿದ್ದ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಸೇವಾ ಹೀ ಪರಮೋಧರ್ಮ ತತ್ವದ ಅಡಿ ನಿಜವಾದ ಸೇವೆಯನ್ನು ಸೇವಾ ಭಾರತಿ ಮಾಡುತ್ತಿದೆ. ಕಳೆದ 25 ವರ್ಷಗಳಿಂದ ಮಕ್ಕಳಿಗೆ ಸಂಸತಿ ಕಲಿಸುವ ಕೆಲಸ ಮಾಡಿದೆ. ಸಾವಿರಾರು ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡಿದೆ. ಇಂತಹ ಸೇವೆ ಇನ್ನಷ್ಟು ಮುಂದುವರಿಯಲಿ ಎಂದು ಹಾರೈಸಿದರು.
ಸೇವಾ ಭಾರತಿ ಟ್ರಸ್ಟ್ ಕೆಲಸಗಳು ಹುಬ್ಬಳ್ಳಿಗೆ ಸೀಮಿತವಾಗಿಲ್ಲ. ರಾಜ್ಯದ ಅನೇಕ ಕಡೆಗಳಲ್ಲಿ ವಿವಿಧ ಸಂಘಟನೆಗಳ ಹೆಸರಲ್ಲಿ ಸೇವೆ ಮಾಡುತ್ತಿದೆ. ಸಮಾಜದಲ್ಲಿ ಪರಿವರ್ತನೆ ತರುವ ಕೆಲಸ ಮಾಡುತ್ತಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಸೇವೆಯು ಮನುಷ್ಯನ ವಿನಯತೆಯನ್ನು ಹೇಳುತ್ತದೆ. ಹಾಗಾಗಿ, ಇದು ಬಹಳ ಮಹತ್ವದ ವಿಷಯ. ಗುರು ಭಕ್ತಿಯು ಸಮರ್ಪಣಾ ಮನೋಭಾವ ಬೆಳೆಸುತ್ತದೆ. ಗುರು ಭಕ್ತಿ ಕೂಡಾ ಒಂದು ಸಂಸ್ಕಾರ. ನಮ್ಮ ನಾಡಿನ ಮಹಿಳೆಯರು ಸೇವಾ ಮನೋಭಾವದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಕಾರ್ಯದರ್ಶಿ ರಘು ಅಕಮಂಚಿ, ಸಮಾಜವನ್ನು ಪ್ರೀತಿಸಿದಾಗ ಹಾಗೂ ಸಂವೇಧನೆಯನ್ನು ಬೆಳೆಸಿಕೊಂಡಾಗ ಸೇವೆ ಸಾಧ್ಯವಾಗುತ್ತದೆ. ಸೇವಾ ಭಾರತಿಯ ಸೇವೆ ಎಲ್ಲ ಮನೆ& ಮನಗಳಿಗೆ ತಲುಪಬೇಕು ಎನ್ನುವ ದಿಸೆಯಲ್ಲಿ ಕಾರ್ಯ ಮಾಡುತ್ತಿದೆ ಎಂದರು.
ಸೇವಾ ಭಾರತಿ ಲೋಗೋ ಅನಾವರಣ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಸೇವಾ ಭಾರತಿ ಅಧ್ಯಕ್ಷ ಪನ್ನಾಲಾಲ್ ಬನ್ಸಾಲಿ ಮಾತನಾಡಿದರು.
ಸುಜಯ ಶಾನಭಾಗ ಅವರ ನೇತೃತ್ವದಲ್ಲಿ ವೀರ ಭಾರತಿ ಪ್ರಸ್ತುತಿ, ಸೇವಾ ಭಾರತಿ ಟ್ರಸ್ಟ್ ಅಡಿ ನಡೆಯುತ್ತಿರುವ ವಿವಿಧ ಶಾಲೆ, ಕಲ್ಯಾಣ ಕೇಂದ್ರಗಳ ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮಗಳು ನಡೆದವು.
ಸೇವಾ ಭಾರತಿ ಅಧ್ಯಕ್ಷ ರ್ಪೂಣಚಂದ್ರರಾವ ಘಂಟಸಾಲ, ಮಜೇಥಿಯಾ ಫೌಂಡೇಷನ್ ಅಧ್ಯಕ್ಷೆ ನಂದಿನಿ ಕಶ್ಯಪ, ಬಸವರಾಜ ಡಂಬಳ, ಶಂಕರ ಗುಮಾಸ್ತೆ, ಸುಭಾಸಸಿಂಗ್ ಜಮಾದಾರ, ಇತರರರು ಪಾಲ್ಗೊಂಡಿದ್ದರು.
ಡಾ. ಜ್ಯೋತಿಲಕ್ಷಿ$್ಮ ಪ್ರಾರ್ಥನೆ ಹಾಡಿದರು. ಡಾ. ವಿಜಯಮಹಾಂತೇಶ ಪೂಜಾರ ಕಾರ್ಯಕ್ರಮ ನಿರೂಪಿಸಿದರು. ಡಾ. ಎಚ್.ಡಿ. ಪಾಟೀಲ ಪರಿಚಯಿಸಿದರು.