ಮುದ್ದೇಬಿಹಾಳ ಪಟ್ಟಣದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಕಾಯಕ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಲೀಲಾ ಭಟ್, ಶಾಂತಾ ಭಟ್, ರಾಮಚಂದ್ರ ಹೆಗಡೆ, ರಂಜಿತಾ ಹೆಗಡೆ, ಜಿ.ಜೆ.ಪಾದಗಟ್ಟಿ, ಬಿ.ಟಿ.ಭಜಂತ್ರಿ, ಬಸವರಾಜ ಸೋನಾರ್, ಶಿವಶಂಕರಯ್ಯ ಮಠ, ಕೀರ್ತಿ ತಳಗೇರಿ, ತೇಜಸ್ವಿನಿ ಕಾಟಿ ಇತರರಿದ್ದರು. 
ಜಿಲ್ಲೆ

ವೃತ್ತಿಯಲ್ಲಿ ಮನಸ್ಸು ನೆಲೆಗೊಳಿಸಿ

ಗಿರೀಶ ಸಗರ

ಮುದ್ದೇಬಿಹಾಳ: ಪಟ್ಟಣದ ತಂಗಡಗಿ ರಸ್ತೆ ಪಕ್ಕದಲ್ಲಿರುವ ಸ್ವಾಮಿ ವಿವೇಕಾನಂದ ವಿದ್ಯಾವರ್ಧಕ ಸಂಸ್ಥೆಯ ಜ್ಞಾನಭಾರತಿ ವಿದ್ಯಾಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಕಾಯಕ ಶರಣರಾದ ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ, ಮಾದಾರ ಚನ್ನಯ್ಯ, ಧೂಳಯ್ಯ, ಸಮಗಾರ ಹರಳಯ್ಯ ಅವರ ಭಾವಚಿತ್ರ ಪೂಜಿಸುವ ಮೂಲಕ ಕಾಯಕ ಶರಣರ ಜಯಂತಿ ಆಚರಿಸಲಾಯಿತು.

ಪ್ರೌಢಶಾಲೆ ಮುಖ್ಯಾಧ್ಯಾಪಕ ರಾಮಚಂದ್ರ ಹೆಗಡೆ ಮಾತನಾಡಿ, ಸರ್ವಾಂಗೀಣ ವಿಕಾಸಕ್ಕಾಗಿ ವೃತ್ತಿಪರತೆ, ಕಾಯಕ ಅತ್ಯಗತ್ಯವಾಗಿದೆ. ಕಾಯಕ ಶರಣರು ಮಾನ, ಸಮ್ಮಾನಕ್ಕಾಗಿ ಕೆಲಸ ಮಾಡಿದವರಲ್ಲ. ಮಾನ್ಯತೆಗಿಂತ ಧನ್ಯತೆ ಮುಖ್ಯ ಎನ್ನುವುದನ್ನರಿತು ಕೆಲಸ ಮಾಡಿದ್ದರು.

ತಮ್ಮ ವೃತ್ತಿಯಲ್ಲಿ ಮನಸ್ಸನ್ನು ನೆಲೆಗೊಳಿಸಿ ಆತ್ಮಸಾಕ್ಷಾತ್ಕಾರದ ಮೂಲಕ ಬದುಕನ್ನು ಕಟ್ಟಿಕೊಂಡವರಾಗಿದ್ದರು. ಭೋಗಭಾಗ್ಯಗಳಿಗಿಂತ ಕಾಯಕ ತೃಪ್ತಿ ಮುಖ್ಯವಾಗಿದೆ ಎನ್ನುವುದನ್ನು ಅರಿತವರಾಗಿದ್ದರು. ವಿದ್ಯಾರ್ಥಿಗಳು ನೈತಿಕ, ಮೌಲ್ಯಯುತವಾದ ಕಾಯಕವನ್ನು ಭವಿಷ್ಯದ ಜೀವನದಲ್ಲಿ ರೂಢಿಸಿಕೊಳ್ಳಬೇಕು.

ವಿಲಾಸಿ ಜೀವನವು ಮನಸ್ಸು ಮತ್ತು ದೇಹದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕಾಯಕದ ಆದರ್ಶ ಜೀವನ ದೀರ್ಘಾಯುಷ್ಯದೆಡೆಗೆ ನಿಸ್ಸಂಶಯವಾಗಿ ಕೊಂಡೊಯ್ಯುತ್ತದೆ ಎಂದರು.

ಸಂಸ್ಥೆಯ ನಿರ್ದೇಶಕರಾದ ಲೀಲಾ ಭಟ್ಟ, ಶಾಂತಾ ಭಟ್ಟ, ಪ್ರಾಥಮಿಕ ಶಾಲೆ ಮುಖ್ಯಗುರು ಜಿ.ಜೆ.ಪಾದಗಟ್ಟಿ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರುಮಾತೆ ರಂಜಿತಾ ಹೆಗಡೆ, ಶಿಕ್ಷಕರಾದ ಬಿ.ಟಿ.ಭಜಂತ್ರಿ, ಬಸವರಾಜ ಸೋನಾರ, ಶಿವಶಂಕರಯ್ಯ ಮಠ, ಕೀರ್ತಿ ತಳಗೇರಿ, ತೇಜಸ್ವಿನಿ ಕಾಟಿ ಇತರರಿದ್ದರು.

ತಾಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ಕಾಯಕ ಶರಣರ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಬಸವರಾಜ ನಾಗರಾಳ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರತಿನಿಧಿಗಳು, ಸಂಘಟನೆಗಳ ಮುಖಂಡರು ಇದ್ದರು.