ಮುಂಡರಗಿ: ನ್ಯಾಯಾಲಯಗಳಲ್ಲಿರುವ ಕ್ರಿಮಿನಲ್ ಮತ್ತು ಸಿವಿಲ್ ದಾವೆಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ರಾಷ್ಟ್ರೀಯ ಲೋಕ-ಅದಾಲತ್ ಆಯೋಜಿಸಲಾಗುತ್ತದೆ. ರಾಜೀ ಮೂಲಕ ಸಂಧಾನಗೊಂಡರೆ ನ್ಯಾಯಾಲಯಕ್ಕೆ ತುಂಬಿದ ಶುಲ್ಕವನ್ನು ಮರಳಿ ನೀಡಲಾಗುತ್ತದೆ. ಲೋಕ ಅದಾಲತ್‌ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ದಿವಾಣಿ ನ್ಯಾಯಾಧೀಶೆ ಜ್ಯೋತಿ ಕಾಗಿನಕರ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘2005ರ ಕಾನೂನು ಬಂದ ನಂತರ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಪಾಲು ಇದೆ ಎನ್ನುವುದು ತಿಳಿಯುತ್ತಿದ್ದಂತೆ ಮಹಿಳೆಯರು ತಮ್ಮ ಹಕ್ಕನ್ನು ಬಲವಾಗಿ ಚಲಾವಣೆ ಮಾಡಲು ಪ್ರಾರಂಭಿಸಿದರು. ಮಹಿಳೆ ಅಬಲೆಯಲ್ಲ, ಸಬಲೆಯಾಗಿ ಬಾಳಬೇಕು. ಪ್ರತಿಯೊಬ್ಬರಿಗೂ ಕಾನೂನು ಇದ್ದು, ದುರ್ಬಲರಿಗೆ ಶಕ್ತಿ ತುಂಬಲು ಸಾಕಷ್ಟು ಕಾನೂನುಗಳಿವೆ’ ಎಂದರು.
ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಅನ್ನದಾನಿ ಮೇಟಿ, ಡಾ.ಪ್ರಕಾಶ ಹೊಸಮನಿ, ವಕೀಲ ಗುರುರಾಜ ಈಳಿಗೇರ, ಪ್ರವಚನ ಸಮಿತಿ ಅಧ್ಯಕ್ಷ ಪವನ ಚೋಪ್ರಾ, ಉಪಾಧ್ಯಕ್ಷ ಓಂಪ್ರಕಾಶ ಲಿಂಗಶೆಟ್ಟರ, ಕಾರ್ಯದರ್ಶಿ ದೇವು ಹಡಪದ, ಸಹ ಕಾರ್ಯದರ್ಶಿ ವೀರೇಂದ್ರ ಅಂಗಡಿ, ಖಜಾಂಚಿ ಶಿವಕುಮಾರ ಬೆಟಗೇರಿ, ಸಹಖಜಾಂಚಿ ವಿಶ್ವನಾಥ ಉಳ್ಳಾಗಡ್ಡಿ, ಎಚ್.ವಿರುಪಾಕ್ಷಗೌಡ್ರ, ಕೊಟ್ರೇಶ ಅಂಗಡಿ, ಎಸ್.ಎಸ್. ಬಿಚ್ಚಾಲಿ, ಪಾಲಾಕ್ಷಿ ಗಣದಿನ್ನಿ ಇತರರು ಇದ್ದರು.