ಕುಳಗೇರಿ ಕ್ರಾಸ್‌ನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಶಾಂತಿ ಪಾಲನಾ ಸಭೆಯಲ್ಲಿ ಸಿ.ಪಿ.ಐ ಕರಿಯಪ್ಪ ಬನ್ನೆ ಮಾತನಾಡಿದರು. ಪಿಎಸ್‌ಐ ವಿಠ್ಠಲ ನಾಯಕ, ರೇಣುಕಾ ಹಿರಗನ್ನವರ, ಸಣ್ಣಬೀರಪ್ಪ ಪೂಜಾರ ಇದ್ದಾರೆ. 
ಜಿಲ್ಲೆ

ಹಲಗೆ ಬಾರಿಸಲು ಕಾಲಮಿತಿ ಹಾಕಿಕೊಳ್ಳಿ

ವಿನಯ ಆಶೋಕ ನಾಯ್ಕ

ಕುಳಗೇರಿ ಕ್ರಾಸ್: ರಾತ್ರಿ ಸಮಯದಲ್ಲಿ ಹಲಗೆ ಬಾರಿಸುವುದರಿಂದ ವೃದ್ಧರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇನ್ಮುಂದೆ ಕಾಲಮಿತಿ ಹಾಕಿಕೊಳ್ಳಬೇಕು ಎಂದು ಸಿಪಿಐ ಕರಿಯಪ್ಪ ಬನ್ನೆ ತಿಳಿಸಿದರು.

ಗ್ರಾಮದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಬಣ್ಣ ಎರಚಾಟ, ಕುಣಿದಾಟ, ಉದ್ದಟತನದ ವರ್ತನೆ, ವಾಹನಗಳ ನಿಲ್ಲಿಸಿ ಹಣ ಸುಲಿಗೆ ಹಾಗೂ ಪಾನಮತ್ತ ಗುಂಗಿನಲ್ಲಿ ಕಿರುಕುಳ ನೀಡಿದರೆ ಕಠಿಣ ಕ್ರಮ ಕೈಗೊಳ್ಳಾಗುವುದು ಎಂದು ಎಚ್ಚರಿಸಿದರು.

ಪಿಎಸ್‌ಐ ವಿಠ್ಠಲ ನಾಯಕ ಮಾತನಾಡಿ, ಅಹಿತಕರ ಘಟನೆಗೆ ಅವಕಾಶ ನೀಡದೆ, ಪರಸ್ಪರ ಸೌಹಾರ್ದದಿಂದ ಹಬ್ಬ ಆಚರಿಸಬೇಕು. ಹಬ್ಬದ ಖುಷಿ ನಮ್ಮಲ್ಲೂ ಇರುತ್ತದೆ. ಮಾ.14ರಿಂದ ಹೋಳಿ ಹಬ್ಬ ಪ್ರಾರಂಭಗೊಳ್ಳಲಿದ್ದು, ಮಾ.15ರಂದು ಕಾಮದಹನ, ಮಾ.16 ರಂದು ಬಣ್ಣದೋಕುಳಿ ಜರುಗಲಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಹಿರಗನ್ನವರ, ಸಣ್ಣಬೀರಪ್ಪ ಪೂಜಾರ, ಗ್ರಾಮ ಪಂಚಾಯಿತಿ ಸದಸ್ಯರಾದ ಯಂಕಣ್ಣ ಹೊರಕೇರಿ, ಹನಮಂತ ನರಗುಂದ, ಶೇಖಪ್ಪ ಪವಾಡಿ ನಾಯ್ಕರ, ಅಬ್ದುಲ್ ಸಾಬ ನದ್ಾ, ಮಹಮ್ಮದ ಸಾಬ್ ಮುಲ್ಲಾ, ಸೈದುಸಾಬ ನದ್ಾ, ಬಿ.ಜಿ. ಲೋಕಾಪೂರ ಮತ್ತಿತರರಿದ್ದರು.