ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅಭಿಮಾನಿಗಳ ಬಳಗದಿಂದ ಸಿದ್ದರಾಮಯ್ಯ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶ್ರೀರಾಂಪುರದ ನವಚೇತನ ಬಸವೇಶ್ವರ ವಿಶೇಷ ಮಕ್ಕಳ (ಬುದ್ಧಿ ಬುದ್ಧಿಮಾಂದ್ಯ ಮಕ್ಕಳ) ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ 50 ಸಾವಿರ ರೂ. ಆರ್ಥಿಕ ಸಹಾಯ ನೀಡಿ ಸಿಹಿ ವಿತರಿಸಲಾಯಿತು.
ಮಾನವೀಯ ಸೇವೆ: ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಒಂದು ಮಗುವನ್ನು ಸಾಕುವುದೇ ಕಷ್ಟ ಎನ್ನುವ ಇಂದಿನ ಸ್ಥಿತಿಯಲ್ಲಿ 60ಕ್ಕೂ ಹೆಚ್ಚು ವಿಶೇಷ ಮಕ್ಕಳನ್ನು ಸಂಸ್ಥೆಯ ಅಧ್ಯಕ್ಷ ಮಾಕಿ ಮರಿಗೌಡ ಅವರು ಪಾಲನೆ ಮಾಡುತ್ತಿರುವುದು ಮಾನವೀಯ ಸೇವೆ. ಇದೇ ನಿಜವಾದ ದೇವರ ಪೂಜೆ ಎಂದು ಅವರು ಶ್ಲಾಘಿಸಿದರು.
ಬಡವರು ಕೂಲಿ ಕಾರ್ಮಿಕರ ಮಕ್ಕಳು ಇಲ್ಲಿ ಹೆಚ್ಚಾಗಿದ್ದು ತಮ್ಮ ಕೆಲಸ ತಾವೇ ಮಾಡಿಕೊಳ್ಳಲಾಗದಂತಹ ಅಸಹಾಯಕ ಸ್ಥಿತಿಯಲ್ಲಿರುವ ಮಕ್ಕಳನ್ನು ನೋಡಿದಾಗ ಮನ ಕಲಕುತ್ತದೆ. ಅಂತಹ ಮಕ್ಕಳ ಸೇವೆ ಮತ್ತು ವಿದ್ಯಾಭ್ಯಾಸ ಕೊಡುತ್ತಿರುವುದು ಅರ್ಥಪೂರ್ಣ ಎಂದರು.
ರಾಜ್ಯ ಕಂಡಂತಹ ಧೀಮಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಅತ್ಯಂತ ಕೆಳ ಹಂತದಿಂದ ಬೆಳೆದು ರಾಷ್ಟ್ರವೇ ಮೆಚ್ಚುವಂತಹ ಮಾದರಿ ಆಡಳಿತ ನೀಡಿದಂತಹ ಮೇರು ವ್ಯಕ್ತಿತ್ವ ಎಂದು ಬಣ್ಣಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ದಾನಿಗಳಾದ ಆಶ್ರಯ ಸಮಿತಿ ಮಾಜಿ ಸದಸ್ಯರಾದ ಶಿವಕುಮಾರ್, ಗುತ್ತಿಗೆದಾರರಾದ ಅಂಬಿಕಾ ಶಿವರಾಜು, ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷರಾದ ವಿನಯ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಶಿಂಷಾ ದಿನೇಶ್, ಭಾಗ್ಯಾ ಚಂದ್ರಶೇಖರ್, ವಿಶ್ವನಾಥ್ (ವಿಶ್ವ), ಅಶೋಕಪುರಂ ಪಟಾಕಿ ಮಂಜುನಾಥ, ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಮಹ್ಮದ್ ಫಾರೂಖಿ, ನಗರಪಾಲಿಕೆ ಮಾಜಿ ಪಾಲಿಕೆ ಸದಸ್ಯ ಆರ್.ಎಚ್.ಕುಮಾರ್, ಮಹಿಳಾ ಮುಖಂಡರಾದ ವೀಣಾ, ಲತಾ ಮೋಹನ್, ಶಂಕರ್‌ಬಾಸ್, ಉಪಾಧ್ಯಕ್ಷರಾದ ಪುಟ್ಟಸ್ವಾಮಿ,ಕುಮಾರ್ (ಕುಮ್ಮಿ),ಮಧುರಾಜ್ , ಗಣೇಶ್, ರಾಕೇಶ್, ನಾಸೀರ್ ಮತ್ತಿತರರು ಇದ್ದರು.