ವಿಜಯವಾಣಿ ಸುದ್ದಿಜಾಲ ಹೆಬ್ರಿ
ದೈವದೇವರ ಪೂರ್ಣಾನುಗೃಹದಿಂದ ಜಿಲ್ಲೆಯಲ್ಲಿ ಬ್ರಹ್ಮಕಶೋತ್ಸವ ನಡೆಯುತ್ತಿದೆ. ಯುವಜನತೆ ಹೆಚ್ಚುಹೆಚ್ಚು ಬ್ರಹ್ಮಕಲಶೋತ್ಸವದಲ್ಲಿ ಸೇವೆಗೈಯ್ಯುತ್ತಿರುವುದು ಸನಾತನ ಸಂಸ್ಕೃತಿಯ ಪ್ರತೀಕ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.
ಚಾರ ಮೇಲ್ಬೆಟ್ಟು ಶ್ರೀ ಬ್ರಹ್ಮಬೈದರ್ಕಳ ಮತ್ತು ಶಿವರಾಯ ಗರಡಿಯಲ್ಲಿ ಶುಕ್ರವಾರ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಗರಡಿಗೆ ಕೊಡುಗೆ ನೀಡಿದ ದಾನಿಗಳು, ಶಿಲ್ಪಿಗಳು, ಅರ್ಚಕರು, ವಿವಿಧ ಸಮಿತಿಗಳ ಅಧ್ಯಕ್ಷರು, ಕರಸೇವೆಗೈದವರುನು ್ನಸನ್ಮಾನಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ, ಸುಗ್ಗಿ ಸುಧಾಕರ ಶೆಟ್ಟಿ, ಯಕ್ಷಗಾನ ಪಂಚಮೇಳದ ಯಜಮಾನ ಪಳ್ಳಿ ಕಿಶನ್ ಹೆಗ್ಡೆ, ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ನಾಗರಾಜ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ಜಯಕರ ಹೆಗ್ಡೆ ತಾರಾಳಿ, ಹೆಬ್ರಿ ತಹಸೀಲ್ದಾರ್ ಎಸ್.ಎ.ಪ್ರಸಾದ್, ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಶೆಟ್ಟಿ ಹುತ್ತುರ್ಕೆ, ಬಿ.ಹರ್ಷ ಶೆಟ್ಟಿ ಹುತ್ತುರ್ಕೆ, ಲೀಲಾವತಿ, ಗರಡಿಯ ಆನುವಂಶಿಕ ಆಡಳಿತ ಮೋಕ್ತೇಸರ ಸುರೇಶ ಹೆಗ್ಡೆ ತಾರಾಳಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ, ಆರ್ಥಿಕ ಸಮಿತಿ ಅಧ್ಯಕ್ಷ ವಾದಿರಾಜ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಮಿಥುನ್ ಶೆಟ್ಟಿ ಚಾರ, ದಾನಿ ಕೆರೆಬೆಟ್ಟು ರೂಪಾ ಸೋಮನಾಥ ಪೂಜಾರಿ, ಗರಡಿ ಪೂಜಾರಿ ವರ್ಗದವರಾದ ಲಕ್ಷ್ಮಣ ಪೂಜಾರಿ, ಸುಧಾಕರ ಪೂಜಾರಿ, ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಆನುವಂಶಿಕ 9 ಮನೆಯವರು, ವಾರ್ಡ್ ಸಮಿತಿ ಮುಖ್ಯಸ್ಥರು, ಸದಸ್ಯರು ಉಪಸ್ಥಿತರಿದ್ದರು. ಬಿ.ಹರ್ಷ ಶೆಟ್ಟಿ ಸ್ವಾಗತಿಸಿದರು. ಎಸ್.ನಿತ್ಯಾನಂದ ಶೆಟ್ಟಿ, ದೀಪಿಕಾ ಶೆಟ್ಟಿ ನಿರೂಪಿಸಿದರು.
ಬ್ರಹ್ಮಬೈದರ್ಕಳ ಮತ್ತು ಶಿವರಾಯ ಗರಡಿಯ ಬ್ರಹ್ಮಕಲಶೋತ್ಸವ ಶುಕ್ರವಾರ ಸಂಪನ್ನಗೊಂಡಿತು. ಹೆರ್ಗ ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ ಅರ್ಚಕ ಸುಬ್ರಹ್ಮಣ್ಯ ಹೇರಳೆ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದಲ್ಲಿ ಸೇವೆ ಮಾಡಲು ಅವಕಾಶ ಸಿಗುವುದು ಸೌಭಾಗ್ಯ. ಎಲ್ಲದಕ್ಕೂ ದೈವಸಂಕಲ್ಪ ಅಗತ್ಯ. ಚಾರ ಮೇಲ್ಬೇಟ್ಟು ಕ್ಷೇತ್ರದಲ್ಲಿ ಜನರೆಲ್ಲರೂ ಒಂದಾಗಿ ಪವಿತ್ರ ಕಾರಣಿಕ ಕ್ಷೇತ್ರದ ಬ್ರಹ್ಮಕಲಶದ ಪುಣ್ಯದ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. -ಉದಯ ಕುಮಾರ್ ಶೆಟ್ಟಿ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ https://www.vijayavani.net/health-shield-day-celebrated-in-kota https://www.vijayavani.net/build-flyovers-to-prevent-accidents