ಜಿಲ್ಲೆ

ದೇಶ ಸೇವೆ ಎಲ್ಲಕ್ಕಿಂತ ಶ್ರೇಷ್ಠ

ಬೆಳಗಾವಿ: ದೇಶದ ಗಡಿಯಲ್ಲಿ ನಿಂತು ಮಳೆ, ಚಳಿ ಎನ್ನದೇ ಎದುರಾಳಿ ವಿರುದ್ಧ ಹೋರಾಡುವ ಸೈನಿಕರ ಸೇವೆಗೆ ಬೆಲೆ ಕಟ್ಟಲಾಗದು. ಹೀಗಾಗಿ ಎಲ್ಲ ಸೇವೆಗಳಿಗಿಂತ ದೇಶ ಸೇವೆಯೇ ಶ್ರೇಷ್ಠ ಎಂದು ಸಚಿವ ಲಕ್ಷಿ$್ಮ ಹೆಬ್ಬಾಳ್ಕರ್​ ಅಭಿಪ್ರಾಯಪಟ್ಟರು.

ನಗರದ ಕೆಪಿಟಿಸಿಎಲ್​ ಸಮುದಾಯ ಭವನದಲ್ಲಿ ಶನಿವಾರ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂದ ಜಿಲ್ಲಾ ಟಕ ಆಯೋಜಿಸಿದ್ದ 26ನೇ ಕಾರ್ಗಿಲ್​ ಮತ್ತು ಆಪರೇಷನ್​ ಸಿಂಧೂರ ವಿಜಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸೈನಿಕರು ಭಾರತದ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಸೇವೆಯಿಂದ ನಿವೃತ್ತರಾದರೂ ಅವರ ಉತ್ಸಾಹ ಮಾತ್ರ ಕುಂದಿಲ್ಲ. ದೇಶದ ಗಡಿಯಲ್ಲಿ ನಿಂತು ವೈರಿಗಳ ಗುಂಡಿಗೆ ಎದೆಕೊಟ್ಟು ಹೋರಾಡಿದ ವೀರ ಯೋಧರ ಬಗ್ಗೆ ಎಷ್ಟು ಹೇಳಿದರೂ ಸಾಲದು ಎಂದು ಹೇಳಿದರು.

ಕಾರ್ಗಿಲ್​ ಯುದ್ದ ಗೆದ್ದಿದ್ದೇವೆ. ಇತ್ತೀಚೆಗೆ ಆಪರೇಷನ್​ ಸಿಂಧೂರ್​ ಮೂಲಕ ನಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದೇವೆ. ಇದಕ್ಕೆ ಭಾರತದ ದೇಶ ಹೆಚ್ಚು ವೀರರನ್ನು ಹೊಂದಿರುವುದೇ ಸಾ. ಎಂದರು.

ಶ್ರೀ ರುದ್ರಯ್ಯ ಹಿರೇಮಠ ಸ್ವಾಮೀಜಿ, ಶಾಸಕರಾದ ಆಸ್​ೀ ಸೇಠ್​, ಬಸಪ್ಪ ತಳವಾರ, ಯುವರಾಜ ಕದಂ, ಮನೋಹರ ಬೆಳಗಾಂವಕರ, ಶಂಕರಗೌಡ ಪಾಟೀಲ, ಸುನೀಲ ದಾಗರ, ಕಲ್ಲಪ್ಪ ಪಾಟೀಲ, ಆರ್​.ವೈ. ಹಿರೇಮಠ, ಮಾಜಿ ಸೈನಿಕರು ಹಾಗೂ ಕುಟುಂಬದ ಸದಸ್ಯರು ಇದ್ದರು.