ಎನ್.ಆರ್.ಪುರದಲ್ಲಿ ನಿವೃತ್ತ ಸೈನಿಕ ಕೆ.ಎಸ್.ಮನೋಜ್ ಅವರನ್ನು ಎವರ್ ಗ್ರೀನ್ ಕ್ಲಬ್‌ನಿಂದ ಸನ್ಮಾನಿಸಲಾಯಿತು. ಪಿ.ಜೆ.ಕ್ಸೇವಿಯಾರ್, ಪಿ.ಜೋಯಿ, ಟೋಮಿ, ಪಿ.ಇ.ವಿಜು, ಪಿ.ಜೆ.ಥೋಮಸ್ ಇದ್ದರು. 
ಜಿಲ್ಲೆ

ದೇಶ ಸೇವೆಯೇ ಮಾತೃ ಸೇವೆ

ಎನ್.ಆರ್.ಪುರ: ದೇಶ ಸೇವೆ ಮಾಡುವುದು ಮಾತೃ ಸೇವೆ ಮಾಡಿದಂತೆ ಎಂದು ಹಂತುವಾನಿ ಎವರ್ ಗ್ರೀನ್ ಕ್ಲಬ್ ಸ್ಥಾಪಕ ಅಧ್ಯಕ್ಷ ಪಿ.ಜೆ.ಕ್ಸೇವಿಯಾರ್ ಹೇಳಿದರು.

ಎವರ್ ಗ್ರೀನ್ ಕ್ಲಬ್‌ನಿಂದ ಬುಧವಾರ ನಿವೃತ್ತ ಸೈನಿಕ ಕೆ.ಎಸ್.ಮನೋಜ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ನಿವೃತ್ತ ಸೈನಿಕ ಕೆೆ.ಎಸ್.ಮನೋಜ್ ಯುವಜನರಿಗೆ ಮಾದರಿ. ಅವರನ್ನು ಸನ್ಮಾನಿಸುವ ಮೂಲಕ ದೇಶಕ್ಕೆ ಗೌರವ ಸಲ್ಲಿಸಬೇಕು ಎಂದರು. ಎವರ್ ಗ್ರೀನ್ ಕ್ಲಬ್ ಅಧ್ಯಕ್ಷ ಪಿ.ಜೋಯಿ, ಸದಸ್ಯರಾದ ಟೋಮಿ, ಮ್ಯಾಥ್ಯೂ, ಪಿ.ಇ.ವಿಜು, ಪಿ.ಜೆ.ಥೋಮಸ್, ಪೌಲೋಸ್, ಏಲಿಯಾಸ್, ವಿಜು, ಡ್ಯಾನಿಯಲ್, ಅಂಥೋಣಿ, ಬೇಬಿ ಇತರರಿದ್ದರು.