ಕಾರ್ಕಳ: ಮಾನವೀಯ ಮೌಲ್ಯ ಮೈಗೂಡಿಸಿ ಸೇವಾ ಮನೋಭಾವದೊಂದಿಗೆ ಘನತೆಯ ಜೀವನ ನಡೆಸಿರುವ ಹಿರಿಯ ಸಾಧಕರ ಆದರ್ಶಗಳೇ ನಮ್ಮ ಬಾಳಿನ ಬೆಳಕಾಗಿದೆ ಎಂದು ಹಿರಿಯ ಸಾಂಸ್ಕೃತಿಕ ಚಿಂತಕ ಮುನಿರಾಜ ರೆಂಜಾಳ ಹೇಳಿದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕ ಆಶ್ರಯದಲ್ಲಿ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಜಗೋಳಿ ನಲ್ಲೂರಿನ ಹಿರಿಯ ಸಮಾಜ ಸೇವಕ ಜಗತ್ಪಾಲ ಕಡಂಬ ಅವರನ್ನು ಅಭಿನಂದಿಸಲಾಯಿತು. ಕಾರ್ಕಳ ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ಇಪ್ಪತ್ತನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಕೆ.ಗುಣಪಾಲ ಕಡಂಬ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕರ್ನಾಟಕ ರಾಜ್ಯ ಕ್ವಾರಿ ಕ್ರಷರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ, ರಂಗ ಸಂಸ್ಕೃತಿ ಕಾರ್ಕಳ ಅಧ್ಯಕ್ಷ ಉದ್ಯಮಿ ನಿತ್ಯಾನಂದ ಪೈ, ಹಿರಿಯ ಸಾಹಿತಿ ಉಪೇಂದ್ರ ಸೋಮಯಾಜಿ, ರೂಪಾ ರವೀಂದ್ರ ಶೆಟ್ಟಿ, ಕಸಾಪ ಪದಾಧಿಕಾರಿಗಳಾದ ಡಾ.ಸುಮತಿ, ಶಿವ ಸುಬ್ರಹ್ಮಣ್ಯ ಭಟ್, ಸೂಡ ದೇವುದಾಸ್, ಸುಲೋಚನಾ ತಿಪ್ಪೇಸ್ವಾಮಿ, ಶ್ರೀವತ್ಸ ಮೊದಲಾದವರು ಉಪಸ್ಥಿತರಿದ್ದರು. ನಲ್ಲೂರು ಹಿರಿಯ ಪ್ರಾರ್ಥಮಿಕ ಶಾಲೆ ಮುಖ್ಯಶಿಕ್ಷಕ ನಾಗೇಶ್ ಸ್ವಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ದೇವದಾಸ ಕೆರೆಮನೆ ವಂದಿಸಿದರು.