ಜಿಲ್ಲೆ

ವೈದ್ಯರಲ್ಲಿ ಸೇವಾ ಮನೋಭಾವ ಮುಖ್ಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಒಳ್ಳೆ ವೈದ್ಯನಿಗೆ ಆಳವಾದ ಜ್ಞಾನಿರಬೇಕು. ವ್ಯವಹಾರಿಕ ಅಥವಾ ವ್ಯಾಪಾರಿ ಮನೋಭಾವದಿಂದ ರೋಗಿಗಳನ್ನು ಕಾಣಬಾರದು. ಇಂತವರು ನಿಜವಾದ ವೈದ್ಯರು ಎನಿಸಿಕೊಳ್ಳುತ್ತಾರೆ ಎಂದು ಎಸ್​ಡಿಎಂ ವೈದ್ಯಕಿಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ರತ್ನಮಾಲಾ ದೇಸಾಯಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀಮತಿ ಅನ್ನರ್ಪೂಣಮ್ಮ ಸಿದ್ಧಲಿಂಗಶಾಸ್ತ್ರಿ ಹಿರೇಮಠ ದತ್ತಿ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಆರೋಗ್ಯ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವೈದ್ಯರು ತಂದೆಯ ಸಮಾನ ಎಂಬ ನಂಬಿಕೆ ಇತ್ತು. ವೈದ್ಯರಲ್ಲಿ ಸೇವಾ ಮನೋಭಾವವಿತ್ತು. ಇವತ್ತಿನ ಬಾಂಧವ್ಯ ವ್ಯಾಪಾರಿಕರಣದ ಒಪ್ಪಂದವಾಗಿರುವುದು ಖೇದದ ಸಂಗತಿ. ದೇವರು ಕೆಲವರನ್ನು ಸಿಲೆಕ್ಟ್​ ಮಾಡಿ ವೈದ್ಯರನ್ನಾಗಿ ಮಾಡಿಸಿ ಸೇವೆ ಮಾಡಲು ಕಳಿಸಿರುತ್ತಾನೆ. ಈ ಅವಕಾಶ ಬಳಸಿಕೊಂಡು ರೋಗಿಗಳ ಸೇವೆ ಮಾಡಬೇಕು ಎಂದರು.
ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿಯ ವಿವೇಕಾನಂದ ಜನರಲ್​ ಆಸ್ಪತ್ರೆ ವಿಶ್ರಾಂತ ವೈದ್ಯಕಿಯ ಮುಖ್ಯಾಧಿಕಾರಿ ಡಾ. ರಮೇಶ ಬಾಬು ಅವರಿಗೆ ಆರೋಗ್ಯ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸತೀಶ ತುರಮರಿ, ಡಾ. ಶೈಲಜಾ ಅಮರಶೆಟ್ಟಿ, ಕೆ.ಎಚ್​. ನಾಯಕ, ಮಹಾಂತೇಶ ನರೇಗಲ್​, ಡಾ. ಪಾರ್ವತಿ ಹಾಲಭಾವಿ, ಪ್ರಮಿಳಾ ಜಕ್ಕಣ್ಣವರ, ಕೆ. ಸರೋಜಿನಿ ದೇವಮಾನೆ, ಬಿ.ಜಿ. ಸಂತೋಜಿ, ಯಕ್ಕೇರಪ್ಪ ನಡುವಿನಮನಿ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.