ಜಿಲ್ಲೆ

ಸೇವಾಮನೋಭಾವ ಅಗತ್ಯ

Davangere - Desk - Mahesh Babu E

ಪರಶುರಾಮಪುರ: ಯುವಜನತೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ನೆಮ್ಮದಿ ಬದುಕು ನಮ್ಮದಾಗುತ್ತದೆ ಎಂದು ಎನ್ನೆಸ್ಸೆಸ್ ಕಾಯರ್ರ್ಕ್ರಮಾಧಿಕಾರಿ ಎಂ.ಕೃಷ್ಣೇಗೌಡ ಅಭಿಪ್ರಾಯಪಟ್ಟರು.

ಪರಶುರಾಮಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಎನ್ನೆಸ್ಸೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಲು ಅತ್ಯುತ್ತಮ ವೇದಿಕೆ ಎನ್ನೆಸ್ಸೆಸ್ ಚಟುವಟಿಕೆ ಸಹಕಾರಿ ಆಗಿದೆ ಎಂದರು.

ಪ್ರಾಂಶುಪಾಲ ಎ.ಬಿ.ಧನುಂಜಯ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಅಧಿಕಾರಿ ಡಾ. ತಿಪ್ಪೇರುದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಜಿತಾ ನಿರೂಪಿಸಿದರು. ಹರೀಶ್ ಸ್ವಾಗತಿಸಿದರು. ಐಕ್ಯೂಎಸಿ ಸಂಚಾಲಕ ಹಲಸಂದಿ ಸತೀಶ್, ಪ್ರಾಧ್ಯಾಪಕರಾದ ಟಿ.ಕೆ.ಶ್ರೀನಿವಾಸ, ಮೊಹಮ್ಮದ್ ಸಾದತ್, ಬಿ.ಟಿ.ಭರತ್, ವೈ.ಲಿಂಗೇಶ್ವರ, ಪ್ರೇಮ್‌ಕುಮಾರ್ ಇದ್ದರು.