ಚಿಕ್ಕೋಡಿ: ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಘದ ತಾಲೂಕು ಘಟಕದಿಂದ ಮಂಗಳವಾರ ತಹಸೀಲ್ದಾರ್ ಚಿದಂಬರ ಕುಲಕರ್ಣಿಗೆ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕಾಧ್ಯಕ್ಷ ಎನ್.ಜಿ. ಪಾಟೀಲ ಮಾತನಾಡಿ, ಸರ್ಕಾರದ ಹೊಸ ನೀತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಬಹುದೊಡ್ಡ ಅನ್ಯಾಯವಾಗಿದೆ. 2017ರ ವರೆಗೆ ನೇಮಕವಾದ ಶಿಕ್ಷಕರನ್ನು 1ರಿಂದ 7 ತರಗತಿ ಶಿಕ್ಷಕರೆಂದು ಪರಿಗಣಿಸಬೇಕು. ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು 2017ರ ಬಳಿಕ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು. ಸೇವಾ ಹಿಂಬಡ್ತಿ ಕ್ರಮ ಹಿಂಪಡೆಯಬೇಕು. ಅರ್ಹತೆಯ ಆಧಾರದ ಮೇಲೆ ಪ್ರೌಢಶಾಲೆಗೆ ಮುಖ್ಯಶಿಕ್ಷಕ ಹಾಗೂ ಹಿರಿಯ ಶಿಕ್ಷಕ ಎಂದು ಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ.ಎಸ್.ಬುಡ್ಡಗೋಳ, ತಾಲೂಕಾಧ್ಯಕ್ಷ ಎನ್.ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಜಿ.ಎಂ.ಕಾಂಬಳೆ, ನಿಕಟಪೂರ್ವ ಅಧ್ಯಕ್ಷ ಎಸ್.ಎಸ್. ದುಪದಾಳ, ಉಪಾಧ್ಯಕ್ಷ ಎಸ್.ಎಸ್. ಯಡೂರಕರ, ಎಲ್.ಎಸ್. ಯಾದಗೂಡೆ, ಖಜಾಂಚಿ ಎಲ್.ಎಸ್. ಬೀರನ್ನವರ, ಎನ್.ಎಸ್. ಕಾಂಬಳೆ, ಎಸ್.ಎನ್. ಬೆಳಗಾವಿ, ಎಸ್.ಎಸ್. ಸಾರಾಪುರೆ, ಸಂತೋಷ ತರಾಳೆ, ಎಸ್.ಕೆ. ವಡಗೊಲೆ, ಎಸ್.ಬಿ.ಹತ್ತಿ, ಸೀಮಾ ಪೀರಜಾದೆ, ಸವಿತಾ ಧೋತರ, ಪುಷ್ಪಾ ಕಾಂಬಳೆ ಇತರರಿದ್ದರು.