ಜಿಲ್ಲೆ

ಸೇವೆಗೆ ಸಂಘಟನಾ ಶಕ್ತಿ ಅಗತ್ಯ

ವೀರೇಶ ಸೌದ್ರಿ

ಹಾನಗಲ್ಲ: ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಭಿನ್ನ ಕ್ಷೇತ್ರಗಳಲ್ಲಿ ಸೇವಾ ನಿರತ ರೋಟರಿ ಕ್ಲಬ್ ತಾಲೂಕಿನಲ್ಲಿಯೂ ಕಾರ್ಯಾರಂಭಿಸುತ್ತಿದ್ದು, ಸಹೃದಯಿಗಳ ಸಹಕಾರ ಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಪಟ್ಟಣದ ಗುರುಭವನದಲ್ಲಿ ರೋಟರಿ ಕ್ಲಬ್ ಆಫ್ ಹಾನಗಲ್ಲ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟನಾ ಶಕ್ತಿ ಸಮಾಜಕ್ಕೆ ಸದಾ ಅಗತ್ಯವಾಗಿದೆ. ಅನೇಕ ಸಂಘ ಸಂಸ್ಥೆಗಳು, ಉದ್ಯಮಿಗಳು ದುಡಿಮೆಯ ಲಾಭಾಂಶದ ಕೆಲ ಭಾಗವನ್ನು ಸಮಾಜ ಸೇವೆಗೆ ಸದುಪಯೋಗ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ರೋಟರಿ ಹಾವೇರಿ ಜಿಲ್ಲಾ ಅಸಿಸ್ಟಂಟ್ ಗೌರ್ನರ್ ಮಾಲತೇಶ ಅರಳೀಮಟ್ಟಿ, ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಆಫ್ ಹಾನಗಲ್ಲ ಅಧ್ಯಕ್ಷ ಉಮೇಶ ಗೌಳಿ, ಹುಬ್ಬಳ್ಳಿಯ ರೋಟರಿ ನಿಕಟಪೂರ್ವ ಅಧ್ಯಕ್ಷ ರಾಜಾ ದೇಸಾಯಿ ಮಾತನಾಡಿದರು.

ಪದಾಧಿಕಾರಿಗಳಾದ ಅಬ್ದುಲ್ ಸಾಧಿಕ್, ಸಂತೋಷ ದೊಡ್ಡಮನಿ, ಭಾಗ್ಯಶ್ರೀ ದೊಡ್ಡಮನಿ, ದೀಪಾ ಗೌಳಿ, ರಾಕೇಶ ಜಿಗಳಿ, ಸಂತೋಷ ವಡ್ಡರ, ಬಸನಗೌಡ ದಳವಾಯಿ, ರಾಮು ಯಳ್ಳೂರ, ಬಸವರಾಜ ಹಾದಿಮನಿ, ಪವನ್ ಮಾಳೋದೆ, ಎಂ.ಎಸ್.ಅಮರದ, ಡಾ.ಗಗನ ಮಾಳೋದೆ, ಬಸನಗೌಡ ಪಾಟೀಲ, ಮಂಜುನಾಥ ಶೆಟ್ಟಿ, ಹರೀಶ ಕಿತ್ತೂರ, ನಾಗರಾಜ ಹಾದಿಮನಿ, ವಿನಾಯಕ ಕಳಸೂರ, ಅಕ್ಷಯ ದೇಶಪಾಂಡೆ ಇತರರಿದ್ದರು.