ಜಿಲ್ಲೆ

ಎನ್ನೆಸ್ಸೆಸ್‌ನಿಂದ ಸೇವೆಯ ಪಾಠ: ಕೆ.ಯಶವಂತ ರೈ ಅಭಿಮತ

Avinash R

ಸುಬ್ರಹ್ಮಣ್ಯ: ಪರರಿಗೆ ಸಹಕಾರ ಮತ್ತು ಸೇವೆ ಮಾಡಿದರೆ ಭವಿಷ್ಯಕ್ಕೆ ಒಳಿತು ಎನ್ನುವ ಪಾಠವನ್ನು ಎನ್‌ಎಸ್‌ಎಸ್ ಬೋಧಿಸಿದೆ ಎಂದು ಎಸ್‌ಎಸ್‌ಪಿಯು ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಕೆ.ಯಶವಂತ ರೈ ಹೇಳಿದರು.

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್ ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಬುಧವಾರ ಎನ್‌ಎಸ್‌ಎಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಎನ್‌ಎಸ್‌ಎಸ್ ಯೋಜನಾಧಿಕಾರಿಗಳಾದ ಪೂರ್ಣಿಮಾ, ಸೌಮ್ಯಾ ದಿನೇಶ್, ಎನ್‌ಎಸ್‌ಎಸ್ ಘಟಕದ ನಾಯಕರಾದ ಹಿತೇಶ್ ಎಚ್.ಎಸ್, ಮೌಲ್ಯಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಅಭಿಪ್ರಾಯಗಳನ್ನು ತಿಳಿಸಿದರು. ಉಪನ್ಯಾಸಕರಾದ ಜಯಪ್ರಕಾಶ್ ಆರ್, ರತ್ನಾಕರ ಎಸ್, ನೌಕರ ಮಹೇಶ್ ಕೆ.ಎಚ್, ವಿದ್ಯಾರ್ಥಿ ನಾಯಕ ಗಗನ್ ಡಿ.ಕೆ ಉಪಸ್ಥಿತರಿದ್ದರು. ಯಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.