ಬೀಳಗಿ ಜಿಎಲ್‌ಬಿಸಿ ಐಬಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೊಳಬಸು ಬಾಳಶೆಟ್ಟಿ ಮಾತನಾಡಿದರು. ಜಗತ್ತ ಕಣವಿ, ಈರಣ್ಣ ತೋಟದ ಇದ್ದರು. 
ಜಿಲ್ಲೆ

17 ರಿಂದ ಅ.2ರವರೆಗೆ ಸೇವಾ ಪಾಕ್ಷಿಕ - ಬಿಜೆಪಿಯಿಂದ ಆಯೋಜನೆ

ಬೀಳಗಿ: ಬೀಳಗಿ ಕ್ಷೇತ್ರದಲ್ಲಿ ಸೆ. 17ರಿಂದ ಅ.2ರವರೆಗೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹಾತ್ಮ ಗಾಂಧೀಜಿ, ಪಂಡಿತ್ ದೀನದಯಾಳ ಉಪಾಧ್ಯಾಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಅಂಗವಾಗಿ ಜನಪರ ಹಾಗೂ ವಿನೂತನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದು ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೊಳಬಸು ಬಾಳಶೆಟ್ಟಿ ತಿಳಿಸಿದರು.

ಜಿಎಲ್‌ಬಿಸಿ ನಿರೀಕ್ಷಣಾ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸೆ. 17ಮತ್ತು 18 ರಂದು ಆರೋಗ್ಯ ಉಚಿತ ತಪಾಸಣೆ ಶಿಬಿರ, ಅ. 2ರವರೆಗೆ ಜೀವ ರಕ್ಷಕ ಲಸಿಕೆ ಅಭಿಯಾನ, ಸೆ.20, 21ರಂದು ಪ್ರಧಾನಿ ನರೇಂದ್ರ ಮೋದಿ ಜೀವನ ಚರಿತ್ರೆ ಪ್ರದರ್ಶನ, ರಕ್ತದಾನ ಶಿಬಿರ, ಸೆ. 22, 23ರಂದು ಅರಳಿಮರ ಸಸಿ ನೆಡುವ ಅಭಿಯಾನ, 24,25ರಂದು ಕಮಲೋತ್ಸವ, 26.27ರಂದು ಅಮೃತ ಸರೋವರ (ಕೆರೆ ಕೊಳ್ಳಗಳ ಸ್ವಚ್ಛತೆ), 25ರಿಂದ 29ರವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಲಾನುಭವಿಗಳ ಸಭೆ ಹಾಗೂ ನೋಂದಣಿ ಅಭಿಯಾನ, 28,29ರಂದು ಅಂಗನವಾಡಿ ದಿವಸ, 30ರಂದು ಶಾಲೆ ಮಕ್ಕಳಿಗೆ ಬ್ಯಾಗ್ ವಿತರಣೆ ಹಾಗೂ ಕ್ಷಯ ರೋಗ ನಿರ್ಮೂಲನಾ ಅಭಿಯಾನ, ಅ. 2ರಂದು ಖಾದಿ ಉತ್ಸವ ಹಾಗೂ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.

ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಜಗತ್ತ ಕಣವಿ, ಈರಣ್ಣ ತೋಟದ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಹಾದೇವಿ ಮೈಸೂರ, ನಿಂಗಪ್ಪ ಧಂದರಗಿ ಸುದ್ದಿಗೋಷ್ಠಿಯಲ್ಲಿದ್ದರು.