ಚಿಕ್ಕಮಗಳೂರು: ಬಿಜೆಪಿ ಅಧಿಕಾರ ಅಥವಾ ಚುನಾವಣೆಗಾಗಿ ದುಡಿಯುವ ಪಕ್ಷ ವಲ್ಲ. ಜನಸಾಮಾನ್ಯರ ಏಳಿಗೆಗೆ ಹಾಗೂ ರಾಷ್ಟçದ ಹಿತಕ್ಕಾಗಿ ದುಡಿಯುತ್ತಿರುವ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಅಂಗವಾಗಿ ಮಂಗಳವಾರ ಸೇವಾ ಪಾಕ್ಷಿಕದ ಹಿನ್ನೆಲೆಯಲ್ಲಿ ಬಿಜೆಪಿ ಯುವಮೋರ್ಚಾದಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿಗಳ ಹುಟ್ಟುಹಬ್ಬದ ದಿನದಿಂದ ದೇಶಾದ್ಯಂತ ಸೇವಾ ಪಾಕ್ಷಿಕ ಅಭಿಯಾನ ಹಮ್ಮಿಕೊಂಡಿz್ದೆÃವೆ. ಅದರಂತೆ ಬಿಜೆಪಿ ಯುವಮೋರ್ಚಾಕ್ಕೆ ರಕ್ತದಾನ ಶಿಬಿರದ ಆಯೋಜಿಸಲು ಸೂಚಿಸಲಾಗಿದೆ. ಅದರಂತೆ ಇಂದು ಅನೇಕರು ಸ್ವಯಂ ಪ್ರೇರಿತರಾಗಿ ರಕ್ತದಾನದಲ್ಲಿ ಪಾಲ್ಗೊಂಡು ಮೋದಿಯವರ ಸೇವೆಗೆ ಕೈಜೋಡಿಸಿದ್ದಾರೆ ಎಂದರು.
ಕಚೇರಿಯಲ್ಲಿ ಸಂಗ್ರಹಗೊAಡ ರಕ್ತವನ್ನು ಜಿಲ್ಲಾಸ್ಪತ್ರೆಯ ಬಡರೋಗಿಗಳಿಗೆ ತುರ್ತು ಸಂದರ್ಭದಲ್ಲಿ ವಿತರಿಸುವ ಮೂಲಕ ಮಹತ್ವದ ಕಾರ್ಯಕ್ಕೆ ಕೈಹಾಕಿz್ದÉÃವೆ. ಜೊತೆಗೆ ರೋಗಿಗಳ ಜೀವ ಉಳಿಸಲು ಬಿಜೆಪಿ ಯುವಮೋರ್ಚಾ ಮುಂದಾಗಿರುವುದು ಹೆಮ್ಮೆಯ ಸಂಗತಿ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಕ್ತದಾನದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ದೇಶಾದ್ಯಂತ ಪ್ರಧಾನಿಗಳ ಜನ್ಮದಿನದಿಂದ ಗಾಂಧಿಜಯAತಿವರೆಗೆ ಬಿಜೆಪಿ ಹಲವಾರು ಸೇವಾ ಸಪ್ತಾಹ ಹಮ್ಮಿಕೊಂಡಿದೆ. ಅದರಂತೆ ಇಂದು ರಕ್ತದಾನ ಶಿಬಿರ ಆಯೋಜಿಸುವ ಮೂಲಕ ರಾಷ್ಟç ನಾಯಕರ ಸೂಚನೆಯನ್ವಯ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಈಗಾಗಲೇ ಜಿಲ್ಲೆಯ ಅನೇಕ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸೇವಾ ಪಾಕ್ಷಿಕ ನಡೆಯುತ್ತಿದೆ. ಹಾಗಾಗಿ ಯುವಸಮೂಹ ಯಾವುದೇ ಭಯಗೊಳ್ಳದೇ ಮುಕ್ತವಾಗಿ ರಕ್ತದಾನಕ್ಕೆ ಮುಂದಾಗಬೇಕು. ರಕ್ತದಾನದಿಂದ ಯಾವುದೇ ಅಡ್ಡಪರಿಣಾಮವಿಲ್ಲ. ಜೊತೆಗೆ ಆರೋಗ್ಯಯುತ ಶಾರೀರ ಹೊಂದಲು ಸಹಾಯವಾಗಲಿದೆ ಎಂದು ಹೇಳಿದರು.
ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್ ಮಾತನಾಡಿ, ರಕ್ತದಾನ ಮತ್ತೊಂದು ಜೀವ ಉಳಿಸುವ ಮಹತ್ತರ ಕಾರ್ಯ. ಹೀಗಾಗಿ ಧೈರ್ಯವಾಗಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಜೊತೆಗೆ ಪ್ರಧಾನಿಗಳ ಆಶಯವನ್ನು ಪೂರೈಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್, ಮುಖಂಡರಾದ ಜೀವನ್ ರಂಗನಾಥ್, ಪುನೀತ್ ಮತ್ತಿತರರಿದ್ದರು.