ಕವಿತಾಳದ ಶ್ರೀ ವಾಸವಿ ಕನ್ನಕಾಪರಮೇಶ್ವರಿ ದೇವಸ್ಥಾನದ ರಥ ಸಮರ್ಪಣೆ ಕಾರ್ಯಕ್ರಮಕ್ಕೆ ಶಾಸಕ ಹಂಪಯ್ಯನಾಯಕ ಚಾಲನೆ ನೀಡಿದರು. ಕಲ್ಮಠದ ಸಿದ್ದಲಿಂಗ ಸ್ವಾಮೀಜಿ, ಇರಕಲ್‌ನ ಬಸವ ಪ್ರಸಾದ ಸ್ವಾಮೀಜಿ, ಪ್ರಮುಖರಾದ ಇಲ್ಲೂರು ಉದಯಕುಮಾರ, ಬಾಗೋಡಿ ಮಂಜುನಾಥ ಶೆಟ್ಟಿ, ಪ್ರಮಿಳಾ ಬಾಯಿ, ಮನ್ಸಾಲಿ ವೆಂಕಯ್ಯ ಶೆಟ್ಟಿ, ಕುಂಟ್ನಾಳ ವೆಂಕಟೇಶ ಶೆಟ್ಟಿ ಇತರರಿದ್ದರು. 
ಜಿಲ್ಲೆ

ಸೇವಾ ಮನೋಭಾವ ಶ್ಲಾಘನೀಯ

ರುದ್ರಪ್ಪ ವಾಲಿ

ಕವಿತಾಳ: ಆರ್ಯವೈಶ್ಯ ಸಮುದಾಯದವರು ದಾನ-ಧರ್ಮದಲ್ಲಿ ತಮ್ಮದೇ ಆದ ಮಹತ್ವ ಹೊಂದಿದ್ದಾರೆ ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.

ಕವಿತಾಳದ ಶ್ರೀ ವಾಸವಿ ಕನ್ನಕಾಪರಮೇಶ್ವರಿ ದೇವಸ್ಥಾನಕ್ಕೆ ರಥ ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಸಮುದಾಯ ದೇವಿಯ ಆರಾಧನೆಯೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವುದು ಶ್ಲಾಘನಾರ್ಹ ಎಂದರು.

ದೇವಸ್ಥಾನಕ್ಕೆ ರಥ ಸಮರ್ಪಣೆ

ಶಾಸಕರಿಗೆ ದೇವಸ್ಥಾನದ ಹೆಬ್ಬಾಗಿಲು ನಿರ್ಮಿಸಿಕೊಂಡುವಂತೆ ಆರ್ಯವೈಶ್ಯ ಸಮುದಾಯದವರು ಮನವಿ ಸಲ್ಲಿಸಿದರು. ರಥವನ್ನು ದಾನವಾಗಿ ನೀಡಿದ ಮನ್ಸಾಲಿ ವೆಂಕಯ್ಯ ಶೆಟ್ಟಿ ಅವರಿಗೆ ಸನ್ಮಾನಿಸಲಾಯಿತು.

ಪ್ರಮುಖರಾದ ತಲ್ಮಾರಿ ಗಿರಿಧರ ಶೆಟ್ಟಿ, ಪಪಂ ಸದಸ್ಯ ರಾಘು, ಮಲ್ಕಜಯ್ಯ ಶೆಟ್ಟಿ, ಗುರುಪ್ರಸಾದ, ಆನಂದ ತುರ್ವಿಹಾಳ, ವೆಂಕಟೇಶ ಬಿ.ಕೆ., ಗುರುರಾಜ ಬಾಗೋಡಿ, ಉದಯಕುಮಾರ ಇಲ್ಲೂರು, ಮಲ್ಲಿಕಾರ್ಜುನ, ವಿಜಯಕುಮಾರ ಕೊಸ್ಗಿ, ಬಾಗೋಡಿ ಪ್ರಮೀಳಾ, ಇಲ್ಲೂರು ಮಂಜುಳಾ, ಬೆಳಗುಂದಿ ಶಿಲ್ಪಾ, ವರಲಕ್ಷ್ಮೀ ಇಲ್ಲೂರು ಇತರರಿದ್ದರು.