ಜಿಲ್ಲೆ

ಪಡಿತರ ಕಾರ್ಡ್ ತಿದ್ದುಪಡಿಗೆ ಹರಸಾಹಸ

Davangere - Prakash Arali

ಹೊನ್ನಾಳಿ: ರೇಷನ್ ಕಾರ್ಡ್ ತಿದ್ದುಪಡಿಗೆ ಜಿಲ್ಲೆಯುಲ್ಲಿ (ಸೆ.6ರಿಂದ 8ರವರೆಗೆ) ಮೂರು ದಿನ ಮಾತ್ರ ಸರ್ಕಾರ ಅವಕಾಶ ನೀಡಿದೆಯಾದರೂ ಸರ್ವರ್ ಸಮಸ್ಯೆಯಿಂದ ಜನತೆ ರೋಸಿ ಹೋಗಿದ್ದಾರೆ.
ದಿನಕ್ಕೆ ಒಂದು ಅಥವಾ ಎರಡು ಮಾತ್ರ ತಿದ್ದುಪಡಿ ಮಾಡಲಾಗುತ್ತಿದೆ. ಬಾಕಿ ನೂರಾರು ಜನ ಸರದಿಯಲ್ಲಿ ನಿಂತರೂ ಸಹ ಉಪಯೋಗ ಇಲ್ಲದಂತಾಗಿ ಮನೆಗೆ ಹಿಂತಿರುಗುತ್ತಿದ್ದಾರೆ.
ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮಾತ್ರ ತಿದ್ದುಪಡಿಗೆ ಅವಕಾಶವಿದೆ. ಸೆ.8ರ ನಂತರ ಮತ್ತೆ ಸರ್ಕಾರ ದಿನಾಂಕ ನಿಗದಿ ಮಾಡುವವರೆಗೂ ಕಾಯಬೇಕಾದ ಸ್ಥಿತಿ ಬಂದಿದೆ. ಇದನ್ನು ಹೊರತು ಪಡಿಸಿದ ಸಮಯ ಹಾಗೂ ದಿನಾಂಕದಲ್ಲಿ ಸೇರ್ಪಡೆಗೆ ಅವಕಾಶ ಇಲ್ಲ ಎಂಬುದು ಜನರ ಅಳಲು.
ತಾಲೂಕಿನಾದ್ಯಂತ ಪ್ರತಿ ಗ್ರಪಂ ಮಟ್ಟದಲ್ಲಿ ಗ್ರಾಮ 1, ತಾಲೂಕು ಕೇಂದ್ರದಲ್ಲಿ ಕರ್ನಾಟಕ 1 ನಲ್ಲಿ ಮಾತ್ರ ಸೇರ್ಪಡೆ, ತಿದ್ದುಪಡಿ ಅಥವಾ ಡಿಲಿಟ್‌ಗೆ ಅವಕಾಶ ನೀಡಲಾಗಿದೆ. ಆದರೆ ಪ್ರತಿನಿತ್ಯ ಸಾರ್ವಜನಿಕರು ಸರದಿಯಲ್ಲಿ ನಿಂತು ಬರಿ ಕೈಯಲ್ಲಿ ಹೋಗುವುದು ಆಗುತ್ತಿದೆ, ಆದರೆ ಕೆಲಸ ಮಾತ್ರ ಆಗುತ್ತಿಲ್ಲ ಎಂದು ಬೇಸತ್ತ ಸಾರ್ವಜನಿಕರು ಅಧಿಕಾರಿ ವರ್ಗಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.