ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ನಯ, ವಿನಯದಿಂದ ಮಾತನಾಡಿ ಭಾಷಾ ಕೋಶಗಳನ್ನು ಬೆಳೆಸಿಕೊಂಡು ನಾಡು ನುಡಿಯ ಸೇವೆ ಮಾಡಬೇಕು ಎಂದು ಉಪನ್ಯಾಸಕ ಕೆ.ಜಿ. ದೇವರಮನಿ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಸರ್ಕಾರಿ ಪ್ರೌಢ ಶಾಲೆ ಆಶ್ರಯದಲ್ಲಿ ಸಾಪ್ತಾಹಿಕ ಸಾಹಿತ್ಯ ಮಾಲಿಕೆ ಅಡಿ ಶಾಲೆ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರ್.ಬಿ. ಖಾದಿರನಾಯಕ ಮಾತಾಡಿ, ಮುಂದೆ ಗುರಿ, ಹಿಂದೆ ಗುರು ಇರಬೇಕು. ನನಗೂ ಶಿಕ್ಷಕರು ಮತ್ತು ಗೆಳೆಯರು ಸಹಕಾರ ನೀಡಿದ್ದರಿಂದ ಗುರಿ ಸಾಧಿಸಲು ಸಾಧ್ಯವಾಯಿತು. ಯೋಜನೆ ಮತ್ತು ಯೋಚನೆ ಕ್ರಮಬದ್ಧವಾಗಿ ಇರಬೇಕು ಎಂದರು.
ಡಾ. ಲಿಂಗರಾಜ ಅಂಗಡಿ ಮಾತನಾಡಿ, ಬಹಳ ಕಷ್ಟ ಪಟ್ಟು ಗುರಿ ಸಾಧಿಸಿರುವ ಮಹನೀಯರು ನಿಮಗೆಲ್ಲ ಪ್ರೇರಣೆ. ಸರ್ಕಾರಿ ಶಾಲೆಯಲ್ಲಿ ಓದಿ ಅತ್ಯುನ್ನತ ಸ್ಥಾನ ಗಳಿಸಿದ ವ್ಯಕ್ತಿಗಳು ನಮ್ಮ ಮಧ್ಯೆಯೇ ಇದ್ದಾರೆ. ಅಂತಹವರಲ್ಲಿ ಖಾದಿರನಾಯಕ ಒಬ್ಬರು ಎಂದರು.
ಮಹಾಂತೇಶ ನರೇಗಲ್ ಮಾತನಾಡಿ, ಮಕ್ಕಳು ಸಾಹಿತ್ಯದ ಕಡೆಗೆ ಗಮನ ನೀಡಿ ಪುಸ್ತಕ ಓದಿ ಜ್ಞಾನ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು. ವಿದ್ಯಾರ್ಥಿ ದಿಸೆಯಿಂದಲೇ ಕವನ, ಕಥೆ ಬರೆಯುವ ರೂಢಿ ಬೆಳೆಸಿಕೊಳ್ಳಬೇಕು ಎಂದರು.
ಕೆ.ಜಿ. ದೇವರಮನಿ ಹಾಗೂ ಶ್ರೀದೇವಿ ಲದ್ದಿಮಠ ಅವರಿಗೆ ಸನ್ಮಾನಿಸಲಾಯಿತು. ಆರ್.ಆರ್. ತಳವಾರ, ಶಿವಾನಂದ ಮುತವಾಡ, ಸೋಮಶೇಖರ ಇಟಗಿ, ಎಂ.ಎ. ಭಾವಿಕಟ್ಟಿ, ಇತರರು ಇದ್ದರು.
ಬಿ.ಜಿ. ಬಶೆಟ್ಟಿ ಸ್ವಾಗತಿಸಿದರು. ಎಂ.ಜಿ. ಹಿರೇಮಠ ನಿರೂಪಿಸಿದರು. ಮಾತಾರ್ಂಡಪ್ಪ ಕತ್ತಿ ವಂದಿಸಿದರು.