ಜಿಲ್ಲೆ

ಬೆಂಗಳೂರು-ಚೆನ್ನೆ ಕಾರಿಡಾರ್​ನಲ್ಲಿ ಸಾವುಗಳ ಸರಣಿ

ಬಂಗಾರಪೇಟೆ; ಚೆನ್ನೆ &ಬೆಂಗಳೂರು ನಡುವೆ ನಡೆಯುತ್ತಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಹೆದ್ದಾರಿ ಕಾಮಗಾರಿ, ಚೆನ್ನೆ$ ಬಂದರು ಹಾಗೂ ಬೆಂಗಳೂರು ಸುತ್ತಮುತ್ತ ಇರುವ ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕಿಸುವ ಉದ್ದೇಶ ಹೊಂದಿದ್ದು, ಉದ್ಘಾಟನೆಗೂ ಮೊದಲೇ ಹೆದ್ದಾರಿಯಲ್ಲಿ ಭೀಕರ ಅಪಘಾತಗಳಾಗುತ್ತಿವೆ.

ಸುಸಜ್ಜಿತವಾಗಿ ನಿಮಾರ್ಣವಾಗಿರುವ ಚೆನ್ನೆ&-ಬೆಂಗಳೂರು ಎಕ್ಸ್​ಪ್ರೆಸ್​ ಹೈಟೆಕ್​ ಹೈವೇ ಇದಾಗಿದ್ದು, ಇಂಡಸ್ಟ್ರಿಯಲ್​ ಕಾರಿಡಾರ್​ ಎಂದೇ ಹೆಸರಾಗಿದೆ. ಲೋಕಸಭಾ ಚುನಾವಣೆಗೂ ಮೊದಲೇ ಹೆದ್ದಾರಿ ಉದ್ಘಾಟನೆ ಮಾಡಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಯತ್ನಪಟ್ಟರೂ ಕಾಮಗಾರಿ ಪೂರ್ಣವಾಗದ ಹಿನ್ನೆಲೆಯಲ್ಲಿ ಉದ್ಘಾಟನೆ ಸಾಧ್ಯವಾಗಿಲ್ಲ. ಆದರೆ ಈಗ ಹೆದ್ದಾರಿ ಕಾಮಗಾರಿ ಬಹುತೇಕ ಸಂಪೂರ್ಣವಾಗಿದ್ದು, ಪ್ರಾಯೋಗಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಸಂಚಾರಕ್ಕೆ ಮುಕ್ತಗೊಳಿಸಿ ಒಂದೆರಡು ತಿಂಗಳು ಕಳೆಯುವಷ್ಟರಲ್ಲೇ ಕಾರಿಡಾರ್​ನ ಅಲ್ಲಲ್ಲಿ ಭೀಕರ ಅಪಘಾತ ಸಂಭವಿಸಿ ಸಾವು&ನೋವು ಉಂಟಾಗುತ್ತಿವೆ. 2025ರ ಮಾ.2ರಂದು ಬಂಗಾರಪೇಟೆ ಸಮೀಪ ಭೀಕರ ಅಪಘಾತವಾಗಿ ಕಮ್ಮಸಂದ್ರದ ಗರ್ಭಿಣಿ ಸೇರಿ ಐವರು ಮೃತಪಟ್ಟಿದ್ದರು. ಮೇ 25ರ ಸಂಜೆ ವಕ್ಕಲೇರಿ ಬಳಿಯ ಹೈವೆ ಎಕ್ಸ್​ಪ್ರೆಸ್​ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಮಹಿಳೆ ಮೃತಪಟ್ಟು, ಅವರ ಮಗ ಗಂಭೀರ ಗಾಯಗೊಂಡಿದ್ದು, ಮೇ 26ರ ಬೆಳಗ್ಗೆ ಹೈವೇಯ ಸಿದ್ದನಹಳ್ಳಿ ಸಮೀಪ ಕಾರು ಅಪಘಾತದಲ್ಲಿ ಆಂಧ್ರದ ವೈದ್ಯ ಮೃತಪಟ್ಟಿದ್ದಾರೆೆ. ಪ್ರಾಯೋಗಿಕ ಸಂಚಾರದಲ್ಲೇ ಇಷ್ಟು ಅಪಘಾತಗಳು ಉಂಟಾಗಿ ಸಾವು&ನೋವಾದಾರೆ ಮುಂದಿನ ಗತಿ ಏನೆಂದು ಪ್ರಶ್ನಿಸಿಕೊಳ್ಳುವಂತಾಗಿದೆ.

ಚೆನ್ನೆ& -ಬೆಂಗಳೂರು ಕಾರಿಡಾರ್​ ಪ್ರಮುಖವಾಗಿ ಚೆನ್ನೆ$ ಬಂದರಿನಿಂದ ಕೆಲವೇ ಗಂಟೆಗಳಲ್ಲಿ ಕೋಲಾರ, ಬೆಂಗಳೂರು, ದೊಡ್ಡಬಳ್ಳಾಪುರ, ದಾಬಸ್​ಪೇಟೆ, ತುಮಕೂರು, ತಮಿಳುನಾಡಿನ ಹೊಸೂರು ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದಲೇ ನಿಮಾರ್ಣವಾಗುತ್ತಿದೆ. 282 ಕಿ.ಮೀ. ಹೆದ್ದಾರಿ ಇದಾಗಿದ್ದು, ಸಂಚಾರ ಮಾಡುವ ವಾಹನಗಳು ತಡರಹಿತವಾಗಿ, ಅತ್ಯಂತ ವೇಗವಾಗಿ ಸಂಚರಿಸುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎನ್ನಲಾಗಿದೆ.

ಕರ್ನಾಟಕದಲ್ಲಿ ಸುಮಾರು 71 ಕಿ.ಮೀ ಹೆದ್ದಾರಿ ಹಾದುಹೋಗಿದ್ದು, ಅಗತ್ಯ ಮಾರ್ಪಾಡುಗಳನ್ನು ಮಾಡಬೇಕಿದೆ. ಈ ಹೆದ್ದಾರಿಯಲ್ಲೂ ಮೈಸೂರು&ಬೆಂಗಳೂರು ಹೆದ್ದಾರಿ ರೀತಿಯಲ್ಲಿ ದ್ವಿಚಕ್ರ ವಾಹನ, ಟ್ರಾ$್ಯಕ್ಟರ್​, ಆಟೋ ಸಂಚಾರಕ್ಕೆ ರ್ನಿಬಂಧ ಹೇರಲಾಗುತ್ತಿದೆ. ತಾತ್ಕಾಲಿಕವಾಗಿ ಈಗಾಗಲೇ ಹೈವೇ ಪೆಟ್ರೋಲಿಂಗ್​ ಆರಂಭಿಸಿದ್ದು, ಹೆದ್ದಾರಿ ಪ್ರಾಧಿಕಾರದ ಜತೆಗೆ ಮಾತುಕತೆ ನಡೆಸಿ ಕೂಡಲೇ ಬೇಕಾದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಅವೈಜ್ಞಾನಿಕ ಕಾಮಗಾರಿ ಕೂಗು

ಅಪಘಾತಗಳು ಸಂಭವಿಸುವ ಹೊತ್ತಿನಲ್ಲಿ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಕೂಗು ಎದ್ದಿದ್ದು, ಸರಿಯಾಗಿ ಸರ್ವೀಸ್​ ರಸ್ತೆ ಮಾಡಿಲ್ಲ, ಅಪಘಾತ ವೇಳೆ ತುರ್ತು ನಿರ್ಗಮನವಾಗಿ ಆಸ್ಪತ್ರೆ ಸೇರಲು ಯಾವುದೇ ಮಾರ್ಗಗಳಿಲ್ಲ. ಸರ್ವೀಸ್​ ರಸ್ತೆಗಳಿದ್ದಿದ್ದರೆ ಈಗಾಗಲೇ ಆಗಿರುವ ಅಪಘಾತಗಳಲ್ಲಿ ಅದೆಷ್ಟೋ ಜೀವಗಳನ್ನು ಉಳಿಸಬಹುದಿತ್ತು ಎನ್ನುವುದು ಪ್ರತ್ಯಕ್ಷ ದರ್ಶಿಗಳ ಮಾತು. ಇನ್ನು ಇದೇ ಹೆದ್ದಾರಿ ವಿಚಾರವಾಗಿ ಈ ಹಿಂದೆ ಸ್ಥಳಿಯ ಶಾಸಕರು ಸಹ ಸರ್ವೀಸ್​ ರಸ್ತೆ ಜತೆಗೆ ಕೋಲಾರ &-ಬಂಗಾರಪೇಟೆ ರಸ್ತೆಯಿಂದ ಹೆದ್ದಾರಿಗೆ ಸಂಪರ್ಕ ಮಾಡಿಕೊಡುವ ರಸ್ತೆ ಅವಶ್ಯ ಇದೆ. ಕೂಡಲೇ ಹೆದ್ದಾರಿ ಪ್ರಾಧಿಕಾರ ಕೆಲ ಮಾರ್ಪಾಡು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಚೆನ್ನೆ&ಬೆಂಗಳೂರು ನಡುವಿನ ಕಾರಿಡಾರ್​ ಉದ್ಘಾಟನೆ ಮುಂಚೆಯೇ ಪ್ರಾಯೋಗಿಕ ಸಂಚಾರದಿಂದ ಅಪಘಾತಗಳು ನಡೆದು ಸಾವು&ನೋವು ಉಂಟಾಗುತ್ತಿರುವು ವಿಷಾದನೀಯ. ಅಫಘಾತ ನಡೆದರೆ ತುರ್ತಾಗಿ ಆಸ್ಪತ್ರೆಗೆ ಸಾಗಿಸಲು ಸರ್ವೀಸ್​ ರಸ್ತೆಗಾಗಿ ಹುಡುಕಾಡಬೇಕು. ರಸ್ತೆಯಲ್ಲಿ ತುರ್ತು ಸೇವೆ ಸಂಖ್ಯೆಗಳನ್ನು ಹೆಚ್ಚಾಗಿ ನಮೂದಿಸಿರಬೇಕು. ಅಲ್ಲಲ್ಲಿ ರೇಡಿಯಂ ಸ್ಟಿಕರ್​ ಅಂಟಿಸಬೇಕು. ಅಪಘಾತಗಳು ನಡೆಯದಂತೆ ಹೆದ್ದಾರಿ ಪ್ರಾಧಿಕಾರ ಹಲವು ಮಾರ್ಗ ಸೂಚಿಗಳನ್ನು ಜಾರಿಗೊಳಿಸಲು ಮುಂದಾಗಬೇಕಿದೆ.

> ಕೆ.ಚಂದ್ರಾರೆಡ್ಡಿ

ಪುರಸಭೆ ಮಾಜಿ ಅಧ್ಯಕ್ಷ, ಬಂಗಾರಪೇಟೆ

ಕಾರು ಅಪಘಾತ- ವೈದ್ಯ ಸಾವು

ಬಂಗಾರಪೇಟೆ ತಾಲೂಕು ಸಿದ್ದನಹಳ್ಳಿ ಸಮೀಪ ಹಾದು ಹೋಗಿರುವ ಬೆಂಗಳೂರು&ಚೆನ್ನೆ$ ಕಾರಿಡಾರ್​ನಲ್ಲಿ ಸೋಮವಾರ ಬೆಳಗ್ಗೆ ಕಾರು ಅಪಘಾತದಲ್ಲಿ ಆಂಧ್ರ ಮೂಲದ ವೈದ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆಂಧ್ರದ ಅನಂತಪುರಂ ನಿವಾಸಿ ಕೃಷ್ಣ ಜಗನ್​ (30) ಮೃತ.

ಅನಂತಪುರಂನಿಂದ ಕುಪ್ಪಂಗೆ ಕಾರಿನಲ್ಲಿ ಹೋಗುವಾಗ ಡಿವೈಡರ್​ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಸಂಪುರ್ಣ ಜಖಂಗೊಂಡಿದೆ. ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.