ಲಕ್ಷೆ್ಮೕಶ್ವರ: ತಾಲೂಕಿನ ರೈತರ ಅನುಕೂಲಕ್ಕಾಗಿ ತಾಲೂಕು ಕೇಂದ್ರದಲ್ಲಿ ರೇಷ್ಮೆ ಇಲಾಖೆಯ ತಾಂತ್ರಿಕ ಸೇವಾ ಕೇಂದ್ರ ಪ್ರಾರಂಭಿಸಬೇಕು ಎಂದು ರಾಜ್ಯ ರೈತ ಸಂಘದ ಬಾಲೇಹೊಸೂರು ಗ್ರಾಮ ಘಟಕದ ವತಿಯಿಂದ ಮಂಗಳವಾರ ಶಿರಹಟ್ಟಿಯ ರೇಷ್ಮೆ ತಾಂತ್ರಿಕ ಸೇವಾ ವಿಸ್ತರಣಾಧಿಕಾರಿ ಪವಿತ್ರಾ ವಗ್ಗಣ್ಣವರಗೆ ಮನವಿ ಸಲ್ಲಿಸಲಾಯಿತು.
ಗ್ರಾಮ ಘಟಕದ ಅಧ್ಯಕ್ಷ ಬಿ.ಎಚ್. ಹನುಮರಡ್ಡಿ, ನೇತೃತ್ವ ವಹಿಸಿದ್ದ ರೈತ ಸಂಘದ ಲೋಕೇಶ ಜಾಲವಾಡಗಿ ಮಾತನಾಡಿ, ಈ ಭಾಗದಲ್ಲಿ ರೇಷ್ಮೆ ಬೆಳೆಗಾರರ ಸಂಖ್ಯೆ ಹೆಚ್ಚುತ್ತಿದೆ. ತಾಲೂಕಿನ ರೇಷ್ಮೆ ಬೆಳೆಗಾರರಿಗೆ ಬರಬೇಕಾದ ಅನುದಾನ, ಚಾಕಿ ವೆಚ್ಚ, ಸಾಕಾಣಿಕೆ ವೆಚ್ಚ, ನಾತಿ ವೆಚ್ಚ ಮತ್ತು ರೇಷ್ಮೆ ಗೋದಾಮು ಸಹಿತ ಪ್ರತ್ಯೇಕವಾಗಿ ಲಕ್ಷೆ್ಮೕಶ್ವರ ತಾಲೂಕಿನ ರೈತರನ್ನು ಪರಿಗಣಿಸಬೇಕು. ಇದಕ್ಕಾಗಿ ಶಿರಹಟ್ಟಿ ಹಾಗೂ ಲಕ್ಷೆ್ಮೕಶ್ವರ ತಾಲೂಕುಗಳಿಗೆ ಪ್ರತ್ಯೇಕ ಅನುದಾನ ನೀಡಬೇಕು ಎಂದು ಆಗ್ರಹಿಸಲಾಯಿತು. ರೈತರಾದ ಮಲ್ಲಿಕಾರ್ಜುನ ದೊಡ್ಡಮನಿ, ಹನುಮಂತ ಕೊಳಲ, ರವಿ ಮೂಲಿಮನಿ, ಚಂದ್ರು ರೊಡ್ಡನವರ, ಇತರರಿದ್ದರು.