ಜಿಲ್ಲೆ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದಲ್ಲಿ ಸರಣಿ ಕಳ್ಳತನ

Mangaluru - Desk - Rajesh Shetty

ಸುಳ್ಯ: ಆಲೆಟ್ಟಿ ಗ್ರಾಮದಲ್ಲಿ ಒಟ್ಟು ಮೂರು ಅಂಗಡಿಗಳ ಬೀಗ ಮುರಿದ ಕಳ್ಳರು ಹಣ ಎಗರಿಸಿ ಪರಾರಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ.

ಗ್ರಾಮದ ನಾಗಪಟ್ಟಣ ಬಸ್ ತಂಗುದಾಣ ಪಂಚಾಯಿತಿ ಕಟ್ಟಡದಲ್ಲಿರುವ ಪುಷ್ಪರಾಜ್ ಎಂಬುವರ ಅಂಗಡಿ ಮತ್ತು ಮಿತ್ತಡ್ಕದ ರೋಟರಿ ಶಾಲೆ ಎದುರು ಬಸ್ ತಂಗುದಾಣದ ಪಂಚಾಯಿತಿ ಕಟ್ಟಡದಲ್ಲಿರುವ ದಾಮೋದರ ಅವರ ಅಂಗಡಿಯಿಂದ ಕಳ್ಳತನ ನಡೆದಿದೆ. ರಾತ್ರಿ ವೇಳೆ ಬೀಗಮುರಿದ ಕಳ್ಳರು ದಾಮೋದರ ಅವರ ಅಂಗಡಿಯ ಡ್ರಾವರ್‌ನಲ್ಲಿದ್ದ 10 ಸಾವಿರ ರೂ. ದೋಚಿದ್ದಾರೆ. ನಾಗಪಟ್ಟಣ ಅಂಗಡಿಯಲ್ಲಿ 500 ರೂ.ನಷ್ಟು ಚಿಲ್ಲರೆ ಹಣ ಎಗರಿಸಿದ್ದು, ಫ್ರಿಡ್ಜ್‌ನಲ್ಲಿದ್ದ ಜೂಸ್ ಕುಡಿದು ಕಳ್ಳರು ಪರಾರಿಯಾಗಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಅರಂಬೂರಿನ ಸಲ್ಮಾ ಚಿಕನ್ ಸೆಂಟರ್‌ಗೆ ನುಗ್ಗಿದ ಕಳ್ಳರು ಡ್ರಾವರ್‌ನಲ್ಲಿದ್ದ 5 ಸಾವಿರ ರೂ. ದೋಚಿ ಪರಾರಿಯಾಗಿದ್ದಾರೆ.