ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸೀರಿಯಲ್ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದ ಪುಟ್ಟ ಕಲಾವಿದೆ ನಿಶಿತಾ ಈಗ ದುಬಾರಿ ಕಾರನ್ನು ಖರೀದಿಸಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
6 ವರ್ಷ ವಯಸ್ಸಿನ ಬಾಲನಟಿ ನಿಶಿತಾ ಅ ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿಯೂ ಕೂಡ ತಮ್ಮ ಮುದ್ದಾದ ಅಭಿನಯದ ಮೂಲಕ ಸಾಕಷ್ಟು ವೀಕ್ಷಕರ ಗಮನ ಸೆಳೆದಿದ್ದಾರೆ. ಅದರಲ್ಲೂ ಕ್ಯೂಟ್ ಹುಡುಗಿ ನಿಶಿತಾ ಖುಷಿ ಪಾತ್ರದಲ್ಲಿ ನಟಿಸಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
ನಿಶಿತಾ ಹೊಸ ಹ್ಯುಂಡೈ ಕ್ರೆಟಾ ಕಾರು ಖರೀದಿಸಿದ್ದಾರೆ. ಇದೇ ಕಾರು ನಿಶಿತಾ ಅವರ ತಾಯಿಯ ಹೆಸರಿನಲ್ಲಿದೆ. ಕಾರಿನ ಬೆಲೆ 20.15 ಲಕ್ಷ ರೂಪಾಯಿ ಆಗಿದೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ 9 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.
ಹೊಸ ಕಾರನ್ನು ಖರೀದಿ ಮಾಡಿದ ಖುಷಿಯಲ್ಲಿ ನಿಶಿತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿದ ಅಭಿಮಾಗಳು ಶುಭ ಹಾರೈಸುತ್ತಿದ್ದಾರೆ.