ಜಿಲ್ಲೆ

ಗ್ರಾಪಂ ಸದಸ್ಯನ ಮನೆಯಲ್ಲಿದ್ದ ಸಾಗವಾನಿ ಕಟ್ಟಿಗೆ ವಶ

ವೀರೇಶ ಸೌದ್ರಿ

ಮುಂಡಗೋಡ: ತಾಲೂಕಿನ ಮೈನಳ್ಳಿ ಗ್ರಾಮ ಪಂಚಾಯಿತಿ ಸದಸ್ಯನ ಮನೆ ಮೇಲೆ ಮಂಗಳವಾರ ದಾಳಿ ನಡೆಸಿದ ಶಿರಸಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು 50 ಸಾವಿರ ರೂ. ಮೌಲ್ಯದ ಸಾಗವಾನಿ ಕಟ್ಟಿಗೆ ವಶಪಡಿಸಿಕೊಂಡಿದ್ದಾರೆ.

ಬಡ್ಡಿಗೇರಿ ಗ್ರಾಮದ ಲಕ್ಕು ತೋರವತ್ ಮನೆಯಲ್ಲಿ ಅಕ್ರಮವಾಗಿ 22 ತುಂಡುಗಳನ್ನು ಸಂಗ್ರಹಿಸಿಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಡಿಎಫ್‌ಒ ಅಬ್ದುಲ್ ಅಜೀಜ್ ಶೇಖ ಮಾರ್ಗದರ್ಶನದಲ್ಲಿ ಎಸಿಎಫ್ ಎಸ್.ಎಂ. ವಾಲಿ,ಆರ್‌ಎಫ್‌ಒ ಅಜಯ ನಾಯ್ಕ, ಸಿಬ್ಬಂದಿಗಳಾದ ಇಲಿಯಾಸ ಶೇಖ, ರಾಜು ಪೂಜಾರಿ, ಜಯವಂತ ಹಾಗೂ ಚಾಲಕ ನಂದೀಶ ದಾಳಿ ನಡೆಸಿ ಕಟ್ಟಿಗೆ ವಶ ಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.