ಜಿಲ್ಲೆ

ಬೆಳಗಾವಿಯಲ್ಲಿ ಕೃಷ್ಣವೇಷ ಫ್ಯಾನ್ಸಿ ಡ್ರೆಸ್ ಸ್ಪರ್ಧೆ : ನಿಮ್ಮ ಕಂದನಿಗೂ ಕೃಷ್ಣವೇಷ ಹಾಕಿ ಬಹುಮಾನ ಗೆಲ್ಲಿ

ಬೆಳಗಾವಿ : ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದರ ಜತೆಗೆ ಸ್ಪರ್ಧಾತ್ಮಕ ಮನೋಭಾವ ವೃದ್ಧಿಸುವ ನಿಟ್ಟಿನಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿಯು ಪ್ರತಿವರ್ಷದಂತೆ ಈ ಬಾರಿಯೂ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಸೆ.5ರಂದು ಬೆಳಗಾವಿ ಜಿಲ್ಲೆಯ ಮಕ್ಕಳಿಗಾಗಿ ಕೃಷ್ಣವೇಷ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಆಯೋಜಿಸಿದೆ.

ಬೆಳಗಾವಿ ನಗರದ ಖಡೇಬಜಾರ್ ರಾಮದೇವಗಲ್ಲಿಯಲ್ಲಿನ ‘ಸುಭಾಷ ಫೋಟೋಸ್’ ಸ್ಟುಡಿಯೋನಲ್ಲಿ ಮಂಗಳವಾರ ಬೆಳಗ್ಗೆ 10ರಿಂದ ಸ್ಪರ್ಧೆ ನಡೆಯಲಿದ್ದು, 5 ವರ್ಷದ ವರೆಗಿನ ಮತ್ತು 6 ರಿಂದ 12 ವರ್ಷದೊಳಗಿನ ಒಟ್ಟು ಎರಡು ವಿಭಾಗದಲ್ಲಿ ಸ್ಪರ್ಧೆ ಜರುಗಲಿದೆ. ಎರಡೂ ವಿಭಾಗದ ಮೊದಲ ಮೂರು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು.

1 ರಿಂದ 5ವರ್ಷದ ವಿಭಾಗದಲ್ಲಿ ಪ್ರಥಮ 3,000 ರೂ., ದ್ವಿತೀಯ 2,000 ರೂ.ಹಾಗೂ ತೃತೀಯ ಒಂದು ಸಾವಿರ ರೂ.ನಗದು ಬಹುಮಾನ ಮತ್ತು 6ರಿಂದ 12 ವರ್ಷದ ವಿಭಾಗದಲ್ಲಿ ಪ್ರಥಮ 5,000 ರೂ., ದ್ವಿತೀಯ 3,000 ಹಾಗೂ ತೃತೀಯ ಬಹುಮಾನವಾಗಿ 2,000 ರೂ.ನಗದು ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಈಗಲೂ ಹೆಸರು ನೊಂದಾಯಿಸಬಹುದಾಗಿದ್ದು, ಮೊಬೈಲ್ ಸಂಖ್ಯೆ 8884432338, 8880356665, 8884432467ಕ್ಕೆ ಸಂಪರ್ಕಿಸಬಹುದು.