ಹುಬ್ಬಳ್ಳಿ: ಕಸದ ನಿರ್ವಹಣೆ ನಮ್ಮೆಲರ ಹೊಣೆ. ಕಸವನ್ನು ಮೂಲ ಹಂತದಲ್ಲಿಯೇ ಬೇರ್ಪಡಿಸಿ ಕೊಡುವುದು ನಮ್ಮೆಲ್ಲರ ಕರ್ತವ್ಯ. ಹಸಿರು ದಳ ಹಮ್ಮಿಕೊಂಡಿರುವ ಈ ಕೆಲಸ ಶ್ಲಾಘನೀಯವಾದದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಹು-ಧಾ ಮಹಾನಗರ ಪಾಲಿಕೆ ಹಾಗೂ ಹಸಿರು ದಳ ಸಹಯೋಗದಲ್ಲಿ ಇಲ್ಲಿಯ ವಿದ್ಯಾನಗರದ ವಲಯ ಕಚೇರಿ 5ರ ಹಿಂಭಾಗದ ನೂತನ ಕಾಂಪೋಸ್ಟ್ ಘಟಕ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿ, ಹುಬ್ಬಳ್ಳಿ-ಧಾರವಾಡದಲ್ಲಿ ಕಸ ನಿರ್ವಹಣೆ ತುಂಬಾ ಪ್ರಮುಖವಾದದು. ನಿರ್ವಹಣೆ ಎಲ್ಲರ ಜವಾಬ್ದಾರಿಯಾಗಬೇಕು. ಅದರ ಬಗ್ಗೆ ಇನ್ನೂ ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.
ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ವಲಯ ಕಛೇರಿ 5 ರ ಸಹಾಯಕ ಆಯುಕ್ತ ಆನಂದ ಕಾಂಬಳೆ, ಅಭಿವೃದ್ಧಿ ಅಧಿಕಾರಿ ಶರಣಬಸಪ್ಪ ಕೆಂಭಾವಿ, ಆರೋಗ್ಯ ನಿರೀಕ್ಷಕ ಫಝಲ್, ಸುರೇಶ ರಾಠೋಡ, ಹಸಿರು ದಳ ದ ನಿರ್ದೇಶಕ ಅನಿಲಕುಮಾರ, ರಮೇಶ ಬೇವೂರ, ದೀಪ್ತಿ ಭಜಂತ್ರಿ, ಪರಶುರಾಮ ಕಟಗಿ, ಜ್ಯೋತಿ ನಾಗರಾಳ, ಸಕ್ಕುಬಾಯಿ ನೇಸರಗಿ, ಇತರರು ಉಪಸ್ಥಿತರಿದ್ದರು. ಹಸಿರು ದಳ ವ್ಯವಸ್ಥಾಪಕ ಡಾ. ಮಂಜುನಾಥ ಬಾರಕೇರ ನಿರೂಪಿಸಿದರು. ನಿಂಗನಗೌಡ ಸತ್ತಿಗೌಡ್ರ ಸ್ವಾಗತಿಸಿದರು.