ಜಿಲ್ಲೆ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತರಾದ ಪಿ.ಎಂ. ಮಣ್ಣೂರ ಇನ್ನಿಲ್ಲ

ಕಲಬುರಗಿ ಜಿಲ್ಲೆಯ ಹಾಗೂ ನಾಡಿನ ಹಿರಿಯ ಪತ್ರಕರ್ತರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪಿ.ಎಂ.‌ಮಣ್ಣೂರ್ ಅವರು ಇಂದು ಬೆಂಗಳೂರಿನಲ್ಲಿ ನಿಧ‌ನರಾಗಿದ್ದಾರೆ. ಪತ್ರಿಕಾರಂಗದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.

ಬಾಬುರಾವ ಯಡ್ರಾಮಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕಲಬುರಗಿ ಜಿಲ್ಲೆಯ ಹಾಗೂ ನಾಡಿನ ಹಿರಿಯ ಪತ್ರಕರ್ತರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪಿ.ಎಂ.‌ಮಣ್ಣೂರ್ ಅವರು ಇಂದು ಬೆಂಗಳೂರಿನಲ್ಲಿ ನಿಧ‌ನರಾಗಿದ್ದಾರೆ. ಪತ್ರಿಕಾರಂಗದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.

ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆಯ ಮುತ್ತಗಿ ಗ್ರಾಮದವರು. ಕಳೆದ ಐದು ದಶಕಗಳಿಂದ ಕಲಬುರಗಿಯಲ್ಲಿ ಪತ್ರಿಕೋದ್ಯಮ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ನಿಧನಕ್ಕೆ ಪತ್ರಕರ್ತರು ಕಂಬನಿ‌ ಮಿಡಿದಿದ್ದಾರೆ.

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಮಣ್ಣೂರ್ ಅವರು ಬೆಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ ಮಣ್ಣೂರ್ ವಿಧಿವಶರಾಗಿದ್ದಾರೆ.

ಸತ್ಯಕಾಮ ಕನ್ನಡ ದಿನ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.‌ ಜಿಲ್ಲೆಯ ಸಾಹಿತ್ಯ ರಂಗದಲ್ಲೂ ಪತ್ರಕರ್ತ ಪಿ.ಎಂ. ಮಣ್ಣೂರ್ ಗುರುತಿಸಿಕೊಂಡಿದ್ದರು. 371( ಜೆ) ಹೋರಾಟದಲ್ಲಿ ಮಾಜಿ ಸಚಿವ ದಿವಂಗತ ವೈಜನಾಥ್ ಪಾಟೀಲ್ ನೇತೃತ್ವದ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು.

ಜಿಲ್ಲಾ ಕನ್ನಡ‌ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮತ್ತು
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

ಮೃತರ ಅಂತ್ಯಕ್ರಿಯೆ ನಾಳೆ (ಅ.14 ರಂದು ) ಬೆಳಗ್ಗೆ 11 ಗಂಟೆಗೆ ಕಲಬುರಗಿಯ ನೆಹರು ಗಂಜ್ ರುದ್ರಭೂಮಿಯಲ್ಲಿ ನಡೆಯಲಿದೆ.ಇಂದು ರಾತ್ರಿ8 ಗಂಟೆ ಸುಮಾರಿಗೆ ಪಾರ್ಥಿವ ಶರೀರ ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಲಿದೆ. ಆದರ್ಶ ನಗರದಲ್ಲಿ ಇರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಶನಿವಾರ ಬೆಳಗ್ಗೆ ೧೦-೩೦ ಗಂಟೆಗೆ ನಿವಾಸದಿಂದ ಪಾರ್ಥಿವ ಶರೀರದ ಯಾತ್ರೆ ಹೊರಡಲಿದೆ‌ ನೆಹರು ಗಂಜ್ ರುದಭುಮಿಗೆ ಆಗಮಿಸಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.