ಜಿಲ್ಲೆ

ಮಾನಸಿಕವಾಗಿ ಮಹಿಳೆಯರೇ ಬಲಿಷ್ಠರು ಮಹಿಳಾ ದಿನಾಚರಣೆಯಲ್ಲಿ ಡಾ.ಚೂಂತಾರು ಅಭಿಮತ

ಮಂಗಳೂರು: ವಿಶ್ವ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಒಬ್ಬ ಮಗುವಿನ ವ್ಯಕ್ತಿತ್ವ ರೂಪಿಸಲು ತಾಯಿ ಬೇಕು. ಗಂಡನ ಯಶಸ್ಸಿಗೆ ಹೆಂಡತಿ ಅನಿವಾರ್ಯ ಮತ್ತು ಮನೆಯ ಶಾಂತಿ ಮತ್ತು ನೆಮ್ಮದಿ ವಾತಾವರಣಕ್ಕೆ ಮಹಿಳೆ ಅತೀ ಅಗತ್ಯ. ಮಹಿಳೆ ಅಮ್ಮನಾಗಿ, ಸಹೋದರಿಯಾಗಿ, ಪತ್ನಿಯಾಗಿ, ಸೊಸೆಯಾಗಿ ಪುರುಷರ ಜೀವನದಲ್ಲಿ ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ. ಮಹಿಳೆ ದೈಹಿಕವಾಗಿ ಪುರುಷರಿಗಿಂತ ಬಲಾಡ್ಯವಲ್ಲದಿದ್ದರೂ, ಮಾನಸಿಕವಾಗಿ ಮಹಿಳೆ ಪುರುಷರಿಗಿಂತಲೂ ಬಲಶಾಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಹೇಳಿದರು.
ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಕಚೇರಿಯಲ್ಲಿ ಬುಧವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಿರಿಯ ಗೃಹರಕ್ಷಕಿಯರನ್ನು ಸನ್ಮಾನಿಸಿ, ಅವರು ಮಾತನಾಡಿದರು.
ಹಿರಿಯ ಗೃಹರಕ್ಷಕಿಯರಾದ ಕಮಲಾ, ಸುಮಿತ್ರಾ ಹಾಗೂ ರಂಜನಿ ಅವರನ್ನು ಸನ್ಮಾನಿಸಲಾಯಿತು. ಚೀಫ್ ಟ್ರಾಫಿಕ್ ವಾರ್ಡನ್ ಸುರೇಶ್ ನಾಥ್ ಮುಖ್ಯ ಅತಿಥಿಯಾಗಿದ್ದರು. ಮಹಿಳೆ ತಾಳ್ಮೆಯ ಪ್ರತಿರೂಪ. ಒಂದು ದಿನದಲ್ಲಿ ಮಹಿಳೆ ನಿರ್ವಹಿಸುವ ಕೆಲಸ ಪುರುಷನಿಂದ ಸಾಧ್ಯವಿಲ್ಲ. ಒಬ್ಬ ಪುರುಷ ಪರಿಪೂರ್ಣನಾಗಬೇಕಾದರೆ ಮಹಿಳೆ ಅನಿವಾರ್ಯಎಂದರು.
ಪರಿಸರವಾದಿ ಮಾಧವ ಉಳ್ಳಾಲ ಶುಭ ಹಾರೈಸಿದರು. ಕಚೇರಿ ಅಧೀಕ್ಷಕಿ ಕವಿತಾ ಕೆ.ಸಿ., ಪ್ರಥಮದರ್ಜೆ ಸಹಾಯಕಿ ಅನಿತಾ ಟಿ.ಎಸ್., ದಲಾಯತ್ ಮೀನಾಕಿ,್ಷ ಬೆಳ್ಳಾರೆ ಘಟಕದ ಪ್ರಭಾರ ಘಟಕಾಧಿಕಾರಿ ವಸಂತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
=-=-=-=-=-=-=-